ಯೋಚನೆಗಳು ಯೋಜನೆಯಾಗಿ ಜಾರಿಗೊಳಿಸಿದ್ದೇವೆ

0
14

ಧಾರವಾಡ: ಯೋಚನೆಗಳು ಯೋಜನೆಯಾಗಿ ಜಾರಿಗೊಳಿಸಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಜಿಲ್ಲೆಯ ಪ್ರಗತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಒಂದು ಜಿಲ್ಲೆ ಎಲ್ಲಾ ರೀತಿಯಲ್ಲೂ ಪ್ರಗತಿ ಹೊಂದಬೇಕಾದರೆ ಆ ಜಿಲ್ಲೆಗೆ ಎಲ್ಲಾ ರೀತಿಯ ಸಂಪರ್ಕ ಸಾಧಿಸುವುದು ಬಹಳ ಮುಖ್ಯವಾಗಿರುತ್ತದೆ.
ನಮ್ಮ ಕಲ್ಪನೆ – ಗುರಿ ಇದೇ ಆಗಿದ್ದರಿಂದ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಚಿತ್ರಣ ಬದಲಾಗಿದೆ.‌ ಜಿಲ್ಲೆಯ ಅಭಿವೃದ್ಧಿಯ ವಿಚಾರದ ನಮ್ಮ ಮಾತು ಮಾತಾಗಿರದೆ ಕಾರ್ಯರೂಪಕ್ಕೆ ತಂದಿದ್ದೇವೆ, ಯೋಚನೆಗಳು ಯೋಚನೆಯಾಗಿ ಉಳಿಯದೆ ಯೋಜನೆಯಾಗಿ ಜಾರಿಗೊಳಿಸಿದ್ದೇವೆ. ಇವೆಲ್ಲದರ ಫಲ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಕಾರಣವಾಗಿದೆ. ನಾವು ಮಾಡಿದ ಕೆಲಸಗಳು ಜಿಲ್ಲೆಯ ಜನತೆಯ ಮನೆ ಮಾತಾಗಿ ಉಳಿದಾಗ ಮಾತ್ರ ನಮ್ಮ ಪ್ರಯತ್ನಕ್ಕೆ ಫಲ ದೊರೆಯುವುದು ಎಂದಿದ್ದಾರೆ.

Previous articleನನ್ನ ಉತ್ಸಾಹದ ನಡಿಗೆಗೆ ಇನ್ನಷ್ಟು ಚೈತನ್ಯ
Next articleಮುರುಘಾ ಶ್ರೀಗೆ ಮತ್ತೆ ಸಂಕಷ್ಟ