ಯೋಗೀಶ್​ ಗೌಡ  ಪ್ರಕರಣ:  ಸಿಬಿಐನಿಂದ ತೀವ್ರಗೊಂಡ ತನಿಖೆ

0
12

ಧಾರವಾಡ:  ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಸಿಬಿಐ ತಂಡವು ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿತ್ತು.

ಪ್ರಕರಣ ಕುರಿತು ಮತ್ತಷ್ಟು ತನಿಖೆ ನಡೆಸುವ ಉದ್ದೇಶದಿಂದ ತಂಡ ಇದೀಗ ಚಟುವಟಿಕೆ ತೀವ್ರಗೊಳಿದೆ.

ಸಿಬಿಐ ತಂಡದ  ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ  ತಂಡವು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಸಮಾಲೋಚನೆ ನಡೆಸಿದೆ.

ಅಲ್ಲದೇ ಯೋಗೀಶಗೌಡ ಹತ್ಯೆಯಾದ ಸಪ್ತಾಪುರ ಬಡಾವಣೆಯಲ್ಲಿದ್ದ ಆಗಿನ ಉದಯ ಜಿಮ್‌ಗೂ ಸಿಬಿಐ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Previous articleವಿಜಯ ಕಾಂಚನ್‌ಗೆ ಚಿನ್ನದ ಪದಕ: ಅಭಿನಂದಿಸಿದ ನಳಿನ್‌ ಕುಮಾರ್‌ ಕಟೀಲ್‌
Next articleರೈತರ ಆತ್ಮಹತ್ಯೆಗೆ ಕಾಂಗ್ರೆಸ್ ನೇರ ಹೊಣೆ!!