ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪುಂಡರು

0
24
ಹಲ್ಲೆ

ಹುಬ್ಬಳ್ಳಿ: ಕ್ಷುಲ್ಲಕ ‌ಕಾರಣಕ್ಕೆ ಪುಂಡರ ಗುಂಪೊಂದು ಯುವಕನೋರ್ವನನ್ನು ಬೆತ್ತಲೆಗೊಳಿಸಿ ಹಲ್ಲೆ‌ ನಡೆಸಿದ ವಿಕೃತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ದುಷ್ಕರ್ಮಿಗಳು ವಿಡಿಯೋ ‌ಮಾಡಿ ಪುಂಡಾಟಿಕೆ ಮೆರೆದಿದ್ದು, ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಸೆರೆಯಾದ ಹಲ್ಲೆಯ ದೃಶ್ಯದಲ್ಲಿ ಕೆಲವರ ಮುಖ ಕಾಣಿಸಿಕೊಂಡಿದ್ದು, ಹಲ್ಲೆ ಮಾಡಿದವರು ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ .
ಇನ್ಸ್ಟಾ ಗ್ರಾಂ ರೀಲ್ಸ್ ಮಾಡೋದರ ಬಗ್ಗೆ ಹಾಗೂ ಇನ್ಸ್ಟಾ ಗ್ರಾಂ ಇನ್ ಬಾಕ್ಸ್ ನಲ್ಲಿ ಬೈಯ್ದು ಮೆಸೇಜ್ ‌ಹಾಕಿದ್ದ ಎಂಬ ಕಾರಣಕ್ಕೆ ಹಲ್ಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಲ್ಲೆಗೊಳಗಾದ‌ ಯುವಕ ಅಳುತ್ತಾ ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಸಹಿತ ಕಿರಾತಕರು ಬಿಡದೇ ಪುಂಡಾಟಿಕೆ ಮೆರದಿದ್ದು, ಈ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ವಾಣಿಜ್ಯ ನಗರೀ ಕ್ರೈಂ ನಗರೀ ಆಗುತ್ತಿದ್ದು, ದಿನದಿಂದ ದಿನಕ್ಕೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಅಲ್ಲದೇ ಕ್ಷುಲ್ಲಕ ಕಾರಣಕ್ಕೆ ಅಪರಾಧಗಳ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತಿದ್ದು, ಅವಳಿನಗರದ ಜನತೆ ಬೆಚ್ಚಿ ಬೀಳುವಂತಾಗಿದ್ದು, ಅಪರಾಧಗಳ ತಡೆಗೆ ಪೊಲೀಸ್ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದೇ ಸಾರ್ವಜನಿಕರ ಒತ್ತಾಯವಾಗಿದೆ.

Previous articleಆಗಸ್ಟ್‌ 2ರಿಂದ 370ನೇ ವಿಧಿ ರದ್ದು ವಿರುದ್ಧದ ಅರ್ಜಿ ವಿಚಾರಣೆ
Next articleಕೊಲೆಗಡುಕರು, ದಂಗೆಕೋರರಿಗೆ ಕಾಂಗ್ರೆಸ್ ಬೆಂಬಲ