ಯುಪಿಎ ಸರ್ಕಾರದಿಂದ ಕನ್ನಡಿಗರ ಕೈಗೆ ಚಿಪ್ಪು

0
9

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರೂ ಸುಳ್ಳು ರಾಮಯ್ಯ, ಸುಳ್ಳು ಕುಮಾರ್, ಬುರುಡೆ ಕುಮಾರ್ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಾವು 4,860 ಕೋಟಿ ರೂ. ಪರಿಹಾರ ಕೇಳಿದ್ದೇವೆ ಎಂದು ಹೇಳಿದ್ದಾರೆ. ಆದರೆ ಕೇಂದ್ರ 3,454 ಕೋಟಿ ರೂ. ನೀಡಿದೆ ಎಂದ ಅವರು, ರಾಜ್ಯ ಕೇಳಿದೆಷ್ಟು? ಕೇಂದ್ರ ಸರ್ಕಾರ ಕೊಟ್ಟಿದ್ದೇಷ್ಟು? ಮನಮೋಹನ ಸಿಂಗ್‌ ನೇತೃತ್ವದ ಯುಪಿಎ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು. ಯುಪಿಎ ಸರ್ಕಾರ ಕನ್ನಡಿಗರ ಕೈಗೆ ಚಿಪ್ಪು ಕೊಟ್ಟು ಮೂರು ನಾಮ ಹಾಕಿರುವುದನ್ನು ಅಧಿಕೃತ ದಾಖಲೆಗಳೇ ಸಾಬೀತುಪಡಿಸುತ್ತವೆ ಎಂದರು.

Previous articleಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್‌ ಕಸರತ್ತು
Next articleಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ತಂಡ ರಚನೆ