ಯತ್ನಾಳ ಉಚ್ಚಾಟನೆ ಹಿಂಪಡೆಯಲು ಸ್ವಾಮೀಜಿ ಗಡುವು

0
55
ಬಸವಜಯ ಮೃತ್ಯುಂಜಯ

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೆಲವರು ಕುತಂತ್ರ ಮಾಡಿ ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದು ಖಂಡನೀಯ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಏ.೧೦ ರವರೆಗೆ ಕೇಂದ್ರದ ಬಿಜೆಪಿ ವರಿಷ್ಠರಿಗೆ ಗಡುವು ಕೊಡುತ್ತಿದ್ದೇವೆ. ಅಷ್ಟರೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಏ. 13ರಂದು ಹೋರಾಟ ಮಾಡುತ್ತೇವೆ. ಪಂಚಮಸಾಲಿಗಳು, ಯತ್ನಾಳ ಅಭಿಮಾನಿಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಿಂದುತ್ವದ ಕೂಗು ಅಡಗಿಸಲು ಲಿಂಗಾಯತ ನಾಯಕತ್ವ ಕುಗ್ಗಿಸಲು ಕೆಲವರು ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರ ಉಚ್ಚಾಟನೆ ಆದೇಶ ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು.

Previous articleಸ್ವಾಮೀಜಿ ನಡೆಗೂ ಆಕ್ಷೇಪ ಎತ್ತಿದ ಕಾಶಪ್ಪನವರ
Next articleಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ