ಯತ್ನಾಳ್ ನಮ್ಮ ಪಕ್ಷದ ನಾಯಕನಲ್ಲ: ಅರುಣ್ ಸಿಂಗ್

0
19
arun singh

ಹುಬ್ಬಳ್ಳಿ: ಬಸನಗೌಡ ಪಾಟೀಲ್ ಯತ್ನಾಳ ನಮ್ಮ ಪಕ್ಷದ ನಾಯಕರಲ್ಲ. ಹೀಗಾಗಿ ಅವರ ಹೇಳಿಕೆಗೆ ಅಂತಹ ಮಹತ್ವ ಕೊಡಬೇಕಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ವಿರುದ್ಧ ಮನಸೋ ಇಚ್ಛೆ ಹೇಳಿಕೆ ನೀಡುತ್ತಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ನೋಟಿಸ್ ಕೊಡಲಾಗಿದೆ. ಪಕ್ಷದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದರು.
ಪಕ್ಷದ ನಾಯಕರ ಬಗ್ಗೆ ಮನ ಬಂದಂತೆ ಮಾತನಾಡುವುದು ಒಪ್ಪುವ ಸಂಗತಿಯಲ್ಲ. ಆದರೆ, ಏನು ಮಾಡುವುದು ಕೆಲವರಿಗೆ ಆ ಸ್ವಭಾವ ಇರುತ್ತದೆ. ಯತ್ನಾಳ್ ಕೂಡಾ ಅಂಥವರ ಸಾಲಿಗೆ ಸೇರಿದವರು ಎಂದು ಬೇಸರ ವ್ಯಕ್ತಪಡಿಸಿದ ಅವರು, ಶಿಸ್ತಿಗೆ ಹೆಸರಾದ ನಮ್ಮ ಪಕ್ಷದಲ್ಲಿ ಪಕ್ಷದ ಆಂತರಿಕ ಶಿಸ್ತು ಉಲ್ಲಂಘಿಸಿದವರ ವಿರುದ್ಧ ನಿಶ್ಚಿತ ಕ್ರಮ ಆಗುತ್ತದೆ ಎಂದರು.
ಜಗದೀಶ್ ಶೆಟ್ಟರ ಕಡೆಗಣಿಸಿಲ್ಲ:
ಜಗದೀಶ ಶೆಟ್ಟರ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಪಕ್ಷ ಕಡೆಗಣಿಸುತ್ತಿದೆ ಎಂಬ ಮಾತಿಗೆ ಅರ್ಥವಿಲ್ಲ. ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದ್ದು ಯಾರು? ಟಿಕೆಟ್ ನಿರಾಕರಿಸಲು ಹೇಗೆ ಸಾಧ್ಯ? ಪಕ್ಷವನ್ನು ಅಧಿಕಾರಕ್ಕೆ ತರಲು ಯಾರಿಗೆ ಟಿಕೆಟ್ ನೀಡಿದರೆ ಒಳ್ಳೆಯದು ಎಂದು ನಿರ್ಧರಿಸುವ ಸಮಿತಿಯ ಒಬ್ಬ ನಾಯಕರಲ್ಲಿ ಜಗದೀಶ ಶೆಟ್ಟರ ಅವರೂ ಒಬ್ಬರು ಎಂದು ಹೇಳಿದರು.

Previous articleಸಂಗನಕಲ್ಲು ಗ್ರಾಮದಿಂದ ಮೋಕ ಕಡೆ ಸಾಗಿದ ಭಾರತ್ ಜೋಡೋ ಯಾತ್ರೆ
Next articleಭಾರತ ಜೋಡೋ ಅಲ್ಲ, ಸಿದ್ದರಾಮಯ್ಯ, ಡಿಕೆಶಿ ಜೋಡೊ ಯಾತ್ರೆ: ಅರುಣ್ ಸಿಂಗ್ ವ್ಯಂಗ್ಯ