ಯತ್ನಾಳ್‌ಗೆ ಮೋದಿಯೇ ಸ್ಪರ್ಧಿ

0
19

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಾಂಪಿಟೇಷನ್ (ಸ್ಪರ್ಧಿ) ಇಲ್ಲ ಅಂತ ಅನ್ಕೊಂಡಿದ್ದೆವು. ಆದರೆ, ಇದೀಗ ಸುಳ್ಳು ಹೇಳುವದರಲ್ಲಿ ಶಾಸಕ ಯತ್ನಾಳ್‌ಗೆ ಪ್ರಧಾನಿ ಮೋದಿಯವರೇ ಕಾಂಪಿಟೇಷನ್ ಕೊಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಯತ್ನಾಳ್ ಅವರಿಗಿಂತ ಕೆಳಮಟ್ಟದ ಹೇಳಿಕೆ ಮತ್ತು ಸುಳ್ಳುಗಳನ್ನು ಮೋದಿ ಹೇಳುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿ ಯಾಕೆ ಇಷ್ಟು ಸುಳ್ಳು ಹೇಳ್ತಿದ್ದಾರೆ. ಇದು ಖಂಡನೀಯ ಮಾತುಗಳು ಎಂದು ವಾಗ್ದಾಳಿ ನಡೆಸಿದರು. ನಾವು ಹಿಂದುಳಿದ ಜಾತಿ ಎನ್ನುವುದಿಲ್ಲ, ಹಿಂದುಳಿದ ವರ್ಗ ಎಂದು ಕರೆಯುತ್ತೇವೆ. ಚಿನ್ನಪ್ಪರೆಡ್ಡಿ ವರದಿ ಆಧರಿಸಿಯೇ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿಲ್ಲ. ಇದನ್ನು ಈಗ ಯಾಕೆ ಪ್ರಶ್ನೆ ಮಾಡುತ್ತಿದ್ದೀರಿ. ಹತ್ತು ವರ್ಷ ಯಾಕೆ ಇದರ ಬಗ್ಗೆ ಮಾತನಾಡಿಲ್ಲ ಮೋದಿಯವರೇ ಎಂದು ಪ್ರಶ್ನೆ ಮಾಡಿದರು. ಮೀಸಲಾತಿ ಬದಲಾವಣೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇಲ್ಲ. ದಲಿತರ, ಹಿಂದುಳಿದ ವರ್ಗದ ಮೀಸಲಾತಿ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದರು.

Previous articleಯತ್ನಾಳ ಗೊಡ್ಡೆಮ್ಮೆ ಇದ್ದಂತೆ
Next articleರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದ ಕಾಂಗ್ರೆಸ್