Home Advertisement
Home ತಾಜಾ ಸುದ್ದಿ ಯಕೃತ್ ಸಾಗಣೆ ಯಶಸ್ವಿ

ಯಕೃತ್ ಸಾಗಣೆ ಯಶಸ್ವಿ

0
122

ಬೆಂಗಳೂರು: ನಗರದ ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಅಗತ್ಯ ಇದ್ದ ಯಕೃತ್ ಅನ್ನು ಏರ್ ಆ್ಯಂಬುಲೆನ್ಸ್ ಮೂಲಕ ಬೆಳಗಾವಿಯಿಂದ ಬೆಂಗಳೂರಿಗೆ ಯಶಸ್ವಿಯಾಗಿ ರವಾನಿಸಲಾಗಿದೆ.
ಬೆಂಗಳೂರಿನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಯಕೃತ್ತು ಕಸಿ ಮಾಡುವ ಅಗತ್ಯತೆ ಇತ್ತು. ಆದರೆ ದಾನಿ ಬೆಳಗಾವಿಯಲ್ಲಿ ಇದ್ದರು. ಬೆಳಗಾವಿ ಆಸ್ಪತ್ರೆಯೊಂದರಿಂದ ದಾನಿಯೊಬ್ಬರ ಯಕೃತ್ ಅನ್ನು ರಸ್ತೆ ಮಾರ್ಗದ ಮೂಲಕ ಹುಬ್ಬಳ್ಳಿವರೆಗೆ ತಂದು, ಅಲ್ಲಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಮಾನ ಬರುತ್ತಿದ್ದಂತೆ ಶೂನ್ಯ ಸಂಚಾರ ವ್ಯವಸ್ಥೆಯಲ್ಲಿ ಯಕೃತ್ ಅನ್ನು ಪೊಲೀಸರು ಹಾಗೂ ವೈದ್ಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಯಕೃತ್ ಅನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ ಪೊಲೀಸರು, ವಿಮಾನ ನಿಲ್ದಾಣ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಆಸ್ಪತ್ರೆಯ ವೈದ್ಯರು ಕೃತಜ್ಞತೆ ಅರ್ಪಿಸಿದ್ದಾರೆ.

Previous articleವಿದ್ಯಾ ಮಂತ್ರಿಗೆ ಕನ್ನಡ ಬರಲ್ವಾ
Next articleಕ್ರೂಸರ್ ಪಲ್ಟಿ: ಇಬ್ಬರ ಸಾವು