ಮೈಸೂರು-ದರ್ಬಾಂಗ ಎಕ್ಸ್​ಪ್ರೆಸ್ ರೈಲು ಅಪಘಾತ

0
30

ಚೆನೈ: ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ಟ್ರೈನು ಕಳೆದ ರಾತ್ರಿ ನಡೆದಿದೆ.
ಚೆನೈ ನಗರಕ್ಕೆ ಹತ್ತಿರವಿರುವ ಕವರಪೆಟ್ಟೈ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲೊಂದಕ್ಕೆ ಢಿಕ್ಕಿ ಹೊಡೆದಿದೆ. ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 12-13 ಭೋಗಿಗಳು ಹಳಿತಪ್ಪಿದೆ. ಆ ಭಾಗದಲ್ಲಿ ರೈಲು ಸಂಚಾರ ಮುಚ್ಚಲಾಗಿದ್ದು , ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ. ಕವರೈಪೆಟ್ಟೈ ನಿಲ್ಧಾಣಕ್ಕೆ ಎಕ್ಸ್‌ಪ್ರೆಸ್ ರೈಲು ಪ್ರವೇಶಿಸುವಾಗ ಹಳಿ ಬದಲಾವಣೆಯಾಗಿ ಲೂಪ್ ಲೈನನ್‌ಗೆ ಸ್ಥಳಾಂತರಗೊಂಡಿದ್ದ ಪರಿಣಾಮದಿಂದಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.

ದೊಡ್ಡ ಅನಾಹುತ ತಪ್ಪಿದೆ – ವಿ ಸೋಮಣ್ಣ: ಮೈಸೂರು ದಸರಾ ನಮಗೆ ದೊಡ್ಡ ಹಬ್ಬ. ಆಯುಧ ಪೂಜೆ ದಿನ ಈ ದುರಂತ ಆಗಬಾರದಿತ್ತು. ರೈಲಿನಲ್ಲಿ ಒಟ್ಟು 994 ಜನ ಪ್ರಯಾಣಿಕರಿದ್ದರು. ಅದರಲ್ಲಿ ಮೈಸೂರಿನ 180 ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು. ಚೆನ್ನೈ ತಲುಪಲು ಇನ್ನು 30 ಕಿಮೀ ಇತ್ತು. ಟ್ರ್ಯಾಕ್‌ನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ, 13 ಬೋಗಿಗಳು ಹಳಿ ತಪ್ಪಿದ್ವು, ಪ್ರಯಾಣಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇಂದು ಅವರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುವುದು.

Previous articleಸಿಬಿಐಗೆ ಆಯ್ತು ಈಗ NIAಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ತಡೆಯೇ?
Next articleಮಹಾ ನವಮಿಯಂದೇ ಜಳಪಿಸಿದ ಮಾರಕಾಸ್ತ್ರ, ಸ್ನೇಹಿತನ ಬರ್ಬರ ಕೊಲೆ: ಆರೋಪಿಗಳಿಗೆ ಗುಂಡೇಟು…!