ಮೈಷುಗರ್‌ ಎಂಬ ‘ಬಿಳಿ ಆನೆ’

0
114

ನಷ್ಟದಿಂದ ಲಾಭಕ್ಕೆ ಪರಿವರ್ತನೆಯಾಗುತ್ತಿಲ್ಲ

ಬೆಂಗಳೂರು: ಕಳೆದ 12 ವರ್ಷಗಳಲ್ಲಿ ಮೈ ಶುಗರ್ ಕಂಪನಿಗೆ ಸರ್ಕಾರದಿಂದ 650 ಕೋಟಿ ಅನುದಾನ ಸಿಕ್ಕಿದೆ. ಈ ಅನುದಾನದಲ್ಲಿ ಕನಿಷ್ಠ 3 ಶುಗರ್ ಫ್ಯಾಕ್ಟ್ರಿ ಗಳನ್ನೂ ನಿರ್ಮಿಸಿ ರೈತರಿಗೆ ನೆರವಾಗಬಹುದಾಗಿತ್ತು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮಹಾರಾಷ್ಟ್ರದಲ್ಲಿರುವ ಸಕ್ಕರೆ ಕಂಪನಿಗಳು ನಷ್ಟದಿಂದ ಲಾಭಕ್ಕೆ ಪರಿವರ್ತನೆಯಾಗಿರುವುದು ಅಲ್ಲಿನ ಸರ್ಕಾರದ ಆಡಳಿತಾತ್ಮಕ ಸುಧಾರಣೆಗಳಿಂದ. ಸರ್ಕಾರ ಮಾತ್ರ ಮೈ ಶುಗರ್ ಎಂಬ ‘ಬಿಳಿ ಆನೆ’ ಗೆ ಅನುದಾನ ನೀಡಿ ತೆರಿಗೆದಾರನ ಹಣಕ್ಕೆ ಯಾವುದೇ ಉತ್ತರದಾಯಿತ್ವ ನೀಡದೆ ಇರುವುದು ಶೋಚನೀಯ. ಮೈ ಶುಗರ್ ಕಂಪನಿಯ ಪ್ರತಿಸ್ಪರ್ಧಿಗಳು 7-8 ಟನ್ ನಷ್ಟು ಸಕ್ಕರೆ ಉತ್ಪಾದನೆ ಮಾಡುತ್ತಿದ್ದರೆ, ಮೈ ಶುಗರ್ ಕಂಪನಿ ಕೇವಲ ಒಂದು ಟನ್ ಮಾತ್ರ ಉತ್ಪಾದಿಸಲು ಸಾಧ್ಯವಾಗಿದೆ ಎಂದಿದ್ದಾರೆ.

Previous articleಅವೈಜ್ಞಾನಿಕ ಪರೀಕ್ಷಾ ಪದ್ಧತಿ: ಪರೀಕ್ಷಾರ್ಥಿಗಳ ಭವಿಷ್ಯ ಹಾಳುಗೆಡುವುತ್ತಿವೆ…
Next articleRCB ತಂಡಕ್ಕೆ ನಾಯಕ ಯಾರು?