ಮೈತ್ರಿ ಮುಂದುವರಿಕೆಯ ಬಗ್ಗೆ ತೀರ್ಮಾನ ಶೀಘ್ರ

0
27

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಅವಲೋಕನ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆಯ ಬಗ್ಗೆ ಅಲ್ಲೇ ತೀರ್ಮಾನವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮುಂದುವರಿಕೆ ಬಗ್ಗೆ ವೈಯಕ್ತಿಕವಾಗಿ ಏನನ್ನೂ ಹೇಳುವುದಿಲ್ಲ. ಪಕ್ಷದ ಮುಖಂಡರೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ೨೮ ಲೋಕಸಭಾ ಕ್ಷೇತ್ರಗಳ ವರದಿಯನ್ನು ಕೊಡಲಾಗುತ್ತದೆ. ರಾಜ್ಯಧ್ಯಕ್ಷರು ಮೈತ್ರಿ ಕುರಿತು ತೀರ್ಮಾನಿಸುತ್ತಾರೆ ಎಂದರು.
ಮೈತ್ರಿ ಮಾಡಕೊಂಡ ಮೇಲೆ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಪೆನ್ ಡ್ರೈವ್ ಪ್ರಕರಣದಿಂದ ಚುನಾವಣೆಯಲ್ಲಿ ನೆಗೆಟಿವ್ ಆಗಿಲ್ಲ. ಸಂಸದ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ಆಗಬೇಕು ಎಂಬುದು ನಮ್ಮ ಒತ್ತಾಸೆಯೂ ಆಗಿದೆ. ಆದರೆ, ಪೆನ್ ಡ್ರೈವ್ ಹಂಚಿಕೆಯಾಗಿರುವ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆಯ ಭರದಲ್ಲಿ ಅನೇಕ ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಇದರ ಹಿಂದೆ ಯರ‍್ಯಾರು ಇದ್ದಾರೆ ಎಂಬ ಅಂಶಗಳು ಬಹಿರಂಗವಾಗಬೇಕು. ಸಿಬಿಐ ತನಿಖೆಗೆ ಕೊಟ್ಟಾಗ ಮಾತ್ರ ಇದರ ಹಿಂದಿರುವ ಶಕ್ತಿಗಳು ಬಹಿರಂಗಗೊಳ್ಳುತ್ತೆವೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು. ಷಡ್ಯಂತ್ರ ಮಾಡಿದವರ ಮೇಲೆಯೂ ಕ್ರಮವಾಗಲಿ ಎಂಬುದು ನಮ್ಮ ಬೇಡಿಕೆ ಎಂದರು.

Previous articleಐಎಫ್‌ಎಸ್ ಪರೀಕ್ಷೆಯಲ್ಲಿ ಕೃಪಾಗೆ ೧೮ನೇ ಸ್ಥಾನ
Next articleಹತ್ಯೆಯಾದ ಆಕಾಂಕ್ಷಾಗೆ ಶೇ. ೫೯ ಫಲಿತಾಂಶ