ಮುಸ್ಲಿಮರ ಮೀಸಲಾತಿ ರದ್ದು ಪ್ರಕರಣ: ವಿಚಾರಣೆ ಮುಗಿಯುವವರೆಗೂ ಜಾರಿ ಮಾಡಲ್ಲ

0
20
ಕೇಂದ್ರ ಸಚಿವ ಜೋಶಿ ಆಕ್ಷೇಪ

ಹುಬ್ಬಳ್ಳಿ: ಮುಸ್ಲಿಂ ಮೀಸಲಾತಿಯನ್ನು ರಾಜ್ಯ ಸರ್ಕಾರವು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಮೇ 9ಕ್ಕೆ ಮುಂದೂಡಿದೆ ಅಷ್ಟೇ. ಸರ್ಕಾರದ ಆದೇಶಕ್ಕೆ ತಡೆ ನೀಡಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಉಣಕಲ್‌ನ ಸಿದ್ದೇಶ್ವರನಗರದಲ್ಲಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯ ಕುರಿತು ಮೇಲ್ಮನವಿ ಸಲ್ಲಿಕೆಯಾಗಿ ವಿಚಾರಣೆ ಆರಂಭಗೊಂಡಾಗಲೇ ಕೋರ್ಟ್‌ಗೆ ನಾವು ಈ ಅರ್ಜಿ ವಿಚಾರಣೆ ಪೂರ್ಣ ಆಗುವವರೆಗೂ ಸರ್ಕಾರ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿದ್ದೆವು. ಅದೇ ಪ್ರಕಾರ ರಾಜ್ಯ ಸರ್ಕಾರ ನಡೆದುಕೊಂಡು ಬಂದಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆಯಷ್ಟೇ. ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ವಿಶ್ವಾಸವಿದೆ ರಾಜ್ಯ ಸರ್ಕಾರವು 2ಬಿ ಅಡಿ ಮುಸ್ಲಿಂಮರಿಗಿದ್ದ ಶೇ 4 ರಷ್ಟು ಮೀಸಲಾತಿ ರದ್ದುಪಡಿಸಿರುವುದನ್ನು ಎತ್ತಿ ಹಿಡಿಯಲಿದೆ. ಯಾಕೆಂದರೆ
ಸುಪ್ರೀಂ ಕೋರ್ಟ್ ಉನ್ನತ ಪೀಠ ( ಲಾರ್ಜರ್ ಬೆಂಚ್) ಈ ಹಿಂದೆ ಧರ್ಮದ ಆಧಾರದ ಮೇಲೆ ಮಿಸಲಾತಿ ನಿಗದಿಪಡಿಸಬಾರದು ಎಂದು ತೀರ್ಪು ನೀಡಿತ್ತು. ಹೀಗಾಗಿ, ಈ ಪ್ರಕರಣದಲ್ಲೂ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಲಿದೆ ಎಂಬ ವಿಸ್ವಾಸವಿದೆ ಎಂದರು.

Previous articleಮುಸ್ಲಿಮರ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ
Next articleಶೆಟ್ಟರು ಕ್ಷಮೆ ಕೇಳಿಲ್ಲ.. ನಾವು ಕ್ಷಮೆ ಮಾಡುವ ಪ್ರಶ್ನೆಯೂ ಇಲ್ಲ