ಮುಸ್ಲಿಂರಿಗಾಗಿ ಸಿದ್ದು ಬಜೆಟ್

0
25

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ೧೬ನೇ ಬಜೆಟ್ ರಾಜ್ಯ ಅಭಿವೃದ್ಧಿಗೆ ಅಲ್ಲ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಎಂದು ಬಿಜೆಪಿಯ ಹರಿಹರ ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಉತ್ತಮ ಬಜೆಟ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು, ಈ ಬಾರಿ ಅಭಿವೃದ್ಧಿಯ ಕಡೆಗೆ ಗಮನ ಕೊಡದೆ ಬರೀ ಅಲ್ಪಸಂಖ್ಯಾತರ ಮತಗಳಿಗಾಗಿ ಬಜೆಟ್ ಮಾಡಿದಂತಿದೆ. ಮುಸ್ಲಿಂರಿಗೆ ಸರ್ಕಾರಿ ಭೂಮಿಗೆ ಮೀಸಲಾತಿ, ಸರಳ ಮದುವೆಗೆ ೫೦ ಸಾವಿರ, ಮೂಲ ವಕ್ಫ್ ಆಸ್ತಿ ಅಭಿವೃದ್ಧಿಗೆ ೧೫೦ ಕೋಟಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ೫೦ ಲಕ್ಷ, ಐಟಿಐ ಕಾಲೇಜು, ವಸತಿ ಕಾಲೇಜು ಹೀಗೆ ಹಲವಾರು ಸೌಲಭ್ಯ ಕಲ್ಪಿಸಿ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ೧೫ನೇ ಬಜೆಟ್‌ನ ಯಾವುದೇ ಕಾಲದಲ್ಲಿ ಸಂಪೂರ್ಣವಾಗಿ ಅನುದಾನ ಕೊಟ್ಟಿಲ್ಲ. ಅನುದಾನದ ಬಹುತೇಕ ಭಾಗ ಪಂಚ ಗ್ಯಾರಂಟಿಗಳಿಗೆ ಬಳಸಿದ್ದಾರೆ ಎಂಬ ಅನುಮಾನ ಬರುತ್ತದೆ. ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ನಿಗಮಗಳಲ್ಲಿ ಅವರಿಗೆ ಇಟ್ಟ ಅನುದಾನ ಬಹಳ ಕಡಿಮೆ. ಕಡಿಮೆಯಿದ್ದರೂ ಶೇ.೭೫ರಷ್ಟು ಯಾವುದೂ ಜಾರಿಗೆ ಬಂದಿಲ್ಲ. ದಲಿತ, ಹಿಂದುಳಿದ ವರ್ಗದವರಿಗೆ ವೈಯಕ್ತಿಕ ಸಾಲ, ಗಂಗಾ ಕಲ್ಯಾಣ ಸೌಲಭ್ಯ ಕೊಟ್ಟೇ ಇಲ್ಲ. ಈ ಬಾರಿ ಅಭಿವೃದ್ಧಿ ಪ್ರಶ್ನೆನೇ ಇಲ್ಲ. ಮುಖ್ಯಮಂತ್ರಿಗಳಿಗೆ ಅಲ್ಪಸಂಖ್ಯಾತರು ಅಭಿವೃದ್ಧಿಯಾದರೆ ರಾಜ್ಯ ಅಭಿವೃದ್ಧಿ ಎಂಬ ಕಲ್ಪನೆ ಅವರಿಗಿದೆ ಎಂದು ಕಾಣುತ್ತದೆ ಎಂದರು.
ವಿದ್ಯುತ್ ನಿಗಮದಲ್ಲಿ ಶೇ.೮೦೦ರಷ್ಟು ಮುಸ್ಲಿಂರಿಗೆ ಏರಿಕೆ ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಇವತ್ತು ಜನಸಾಮಾನ್ಯರಿಗೆ ಹೊರೆಯಾಗಿದ್ದಾರೆ. ಎಸ್ಸಿ-ಎಸ್ಟಿ ಅನುದಾನ ೨೧೮ ಕೋಟಿಯಲ್ಲಿ ಕೇವಲ ೧೦೦ ಕೋಟಿ ಕೂಡ ಕಳೆದ ಬಾರಿ ಉಪಯೋಗಿಸಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದರು, ನಾವು ಪ್ರತಿ ಲೀ. ಹಾಲಿಗೆ ೫ ರೂ. ಪ್ರೋತ್ಸಾಹಧನ ಕೊಡುತ್ತಿವೆ ಎಂದಿದ್ದರು. ಆದರೆ ಎರಡು ಬಾರಿ ಹಾಲಿನ ದರ ಏರಿಕೆಯಾದರೂ ಕೂಡ ರೈತರಿಗೆ ಪ್ರೋತ್ಸಾಹಧನ ಕೊಟ್ಟಿಲ್ಲ. ಕೊಡಬೇಕಾದ ೬೫೦ ಕೋಟಿ ಬಾಕಿ ಇನ್ನೂ ಕೊಟ್ಟಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ವಿರೇಶ್ ಹಾಲಪ್ಪ ಆದನೂರು ಇದ್ದರು.

ಸೌಜನ್ಯಕ್ಕಾಗಿ ಸಭೆ ಕರೆಲಿಲ್ಲ..
ಬಜೆಟ್‌ನಲ್ಲಿ ಜಿಲ್ಲೆಗೆ ಯಾವ ಕೊಡುಗೆ ಇಲ್ಲ. ನನ್ನನ್ನು ಬಿಡಿ, ಉಳಿದ ಕಾಂಗ್ರೆಸ್ ಶಾಸಕರ ಸಭೆ ಕರೆದು ಜಿಲ್ಲೆಗೆ ಏನು ಬೇಕೆಂದು ಕೇಳುವ ಸೌಜನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ ಎಂದು ಬಿ.ಪಿ.ಹರೀಶ್ ಆರೋಪಿಸಿದರು.
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಜಿಲ್ಲೆಗೆ ಏನಾದರೂ ಉತ್ತಮ ಕೊಡುಗೆಗಳು ಸಿಗುತ್ತಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ವಿನಃ ಅಭಿವೃದ್ಧಿ ಕಡೆಗೆ ಗಮನ ಕೊಡುತ್ತಿಲ್ಲ ಎಂದು ದೂರಿದರು.
೩೧ಜೆಡ್‌ಸಿ ಅಡಿಯಲ್ಲಿ ಅಕ್ರಮವಾಗಿ ಕೋರೆ ನಡೆಸಲು ಅನುಮತಿ ನೀಡಿ ಭ್ರಷ್ಟಾಚಾರ, ಹೊಸದಾಗಿ ಕೋರ್ ನಡೆಸಲು ಲೀಜ್‌ಗೆ ಅನುಮತಿ ನೀಡಿ ಸಚಿವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ವಿದೇಶಕ್ಕೆ ಹೋಗುವ ಸಚಿವರು ಸಕ್ಕರೆ ಕಾರ್ಖಾನೆ ಆರಂಭಿಸಲು ಹೊಸ ಹೊಸ ಮಿಷನ್ ಖರೀದಿ ಮಾಡಲು ಹೋಗುತ್ತಾರೆ. ಇಂತಹ ಸಚಿವರು ನಮಗೆ ಬೇಕಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಸಚಿವ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುವ ಉತ್ಸಾಹಿ ಸಚಿವರನ್ನು ಜಿಲ್ಲೆಗೆ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿದರು.

Previous articleಬಿಎಸ್‌ವೈದ್ದು ಬ್ಲಾಕ್ ಮೇಲ್ ರಾಜಕಾರಣ
Next articleಪ್ರತಿ ಗ್ರಾಮದಲ್ಲಿ ಭೈರಪ್ಪರಂಥವರು ಹುಟ್ಟಿದರೆ, ನಾಡು ಶ್ರೀಮಂತ