ಮುಂದೇನಾಗುತ್ತದೆ ಎಂದು ಹೇಳಲು ಜ್ಯೋತಿಷಿಯಲ್ಲ

0
17

ಮುಂಡಗೋಡ: ನಾನು ಬಿಜೆಪಿ ಶಾಸಕನಾಗಿದ್ದು, ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ಜ್ಯೋತಿಷಿಯಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂಬುದು ನಾನು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ನನಗೂ ಯಾವುದೆ ಮಾಹಿತಿ ಇಲ್ಲ. ಹೊರಗಡೆ ಇದ್ದವರು ಏನು ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯಲ್ಲಾಪುರ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಮಾಡಿದ್ದೇನೆ. ಈ ವೇಳೆ ಯಾವುದೆ ರಾಜಕೀಯ ಚರ್ಚೆ ನಡೆದಿಲ್ಲ ಎನ್ನುವ ಮೂಲಕ ಬಿಜೆಪಿ ತೊರೆಯುವ ಹಾಗೂ ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದರಿಂದ ಹೆಬ್ಬಾರ್ ನಡೆ ಬಾರಿ ಕುತೂಹಲ ಮೂಡಿಸಿದೆ.

Previous articleಮೀನುಗಾರರ ಬಲೆಗೆ ಬಿತ್ತು ಬೃಹತ್ ಬಂಗಡೆ ಮೀನು
Next articleಬೊಮ್ಮಾಯಿ ಕೇಂದ್ರಕ್ಕೆ ಹೋಗಿ ಬರಗಾಲದ ಮನವರಿಕೆ ಮಾಡಲಿ