ಮಿಸಳ್, ಮಸಾಲಿಖಾರ ಕೂಡಿ ಸೇವಿಸಿದ ಬೊಮ್ಮಾಯಿ-ಜೋಶಿ

0
28
ಮಿಸಳ್

ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಬ್ಬರು ಒಂದೇ ಟೇಬಲ್‌ನಲ್ಲಿ ಕುಳಿತು ಕೂಡಿ ಮಿಸಳ್‌ ಮತ್ತು ಮಸಾಲಾ ಖಾರ ಸೇವಿಸಿದ್ದಾರೆ.
ಹೌದು… ಇಂದು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಎಲ್ಲ ಗಣ್ಯರು ಭಾಗಿಯಾಗಿದ್ದು, ನರೇಂದ್ರ ಮೋದಿಯವರು ಹೋದ ನಂತರ ನಗರದ ಗುರುದತ್ತ ಭವನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅನುರಾದ ಸಿಂಗ್ ಠಾಕೂರ್, ಹಾಲಪ್ಪ ಆಚಾರ್ಯ ಅವರು ಒಂದೇ ಟೇಬಲ್‌ ಮೇಲೆ ಕುಳಿತು ಮಿಸಳ್ ಮಸಾಲಿಖಾರ ಸೇವಿಸಿದ್ದು ವಿಶೇಷವಾಗಿದೆ.

Previous articleಅನಾಥ ಶವದ ಅಂತ್ಯ ಸಂಸ್ಕಾರ ಮಾಡಿದ ಪೊಲೀಸರು
Next articleಸಂಗೀತ ಮಾಂತ್ರಿಕನಿಂದ ಸಂಗೀತ ರಸದೌತಣ