ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ದಾಳಿ

0
21

ಮಾಜಿ ಸಚಿವ ನಾಗೇಂದ್ರ ನಿವಾಸಕ್ಕೆ ಇಡಿ ಅಧಿಕಾರಿಗಳ ಲಗ್ಗೆ

ಬಳ್ಳಾರಿ: ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಎಸ್ಐಟಿ ವಿಚಾರಣೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಮನೆ ಮೇಲೆ ಈಗ ಇಡಿ‌ ಅಧಿಕಾರಿಗಳು ಕೂಡ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮನೆ ಸೇರಿ ಮಾಜಿ ಸಚಿವರ ಬೆಂಗಳೂರು ‌ನಿವಾಸದ  ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಬೆಳಗಿನ ಜಾವವೇ ಬೆಳಿಗ್ಗೆ 3 ರಿಂದ 4 ಜನ ತಂಡದಿಂದ ದಾಳಿ ಆಗಿದೆ. ಅವರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ  ಇಡಿ‌ ಅಧಿಕಾರಿಗಳು, ಸಿಆರ್ ಪಿಎಪ್ ಯೋಧರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆದು ದಾಖಲೆಗಳ ಪರಿಶೋಧನೆ ನಡೆಸಿದ್ದಾರೆ. ಎಎಸ್ಐಟಿ ವಿಚಾರಣೆ ಬಳಿಕ ಈಗ ಇಡಿ ಕೂಡ ರಾಜ್ಯ ವಾಲ್ಮೀಕಿ ನಿಗಮದ ಹಗರಣದ ಕುರಿತು ದಾಳಿ ಮಾಡಿರುವುದು ಮಾಜಿ ಸಚಿವ ನಾಗೇಂದ್ರರಿಗೆ ಸಂಕಷ್ಟ ತಂದೊಡ್ಡಿದೆ.

Previous articleಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
Next articleರಾಯಚೂರು ಗ್ರಾಮೀಣ ಶಾಸಕ ನಿವಾಸದ ಮೇಲೆ ಇಡಿ ಅಧಿಕಾರಿಗಳ ದಾಳಿ