ಮಹಿಳಾ T20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

0
15

ICC ಮಹಿಳಾ T20 ವಿಶ್ವಕಪ್ 2024 ರ ಪಂದ್ಯಗಳನ್ನು ಇಂದು ಪ್ರಕಟಿಸಿದೆ.
ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ 2024 ರ ICC ಮಹಿಳಾ T20 ವಿಶ್ವಕಪ್‌ ಅಕ್ಟೋಬರ್ 3 ರಂದು ಢಾಕಾದಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯು 19 ದಿನಗಳ ಕಾಲ ನಡೆಯಲಿದ್ದು, ಮಹಿಳಾ T20I ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಾಗಿ 23 ಪಂದ್ಯಗಳಲ್ಲಿ 10 ತಂಡಗಳು ಸೆಣಸಲಿವೆ. ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಅಕ್ಟೋಬರ್ 6 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತ ತಂಡ ಆಡಲಿರುವ ಅ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಕ್ವಾಲಿಫೈಯರ್ 1 ತಂಡವಿರಲಿದೆ. ಭಾರತವು ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಸಿಲ್ಹೆಟ್‌ನಲ್ಲಿ ಆಡುತ್ತದೆ. ಮೊದಲ ಸೆಮಿಫೈನಲ್ ಅಕ್ಟೋಬರ್ 17 ಹಾಗೂ ಎರಡನೇ ಸೆಮಿಫೈನಲ್ ಅಕ್ಟೋಬರ್ 18 ರಂದು ನಡೆಯಲಿದ್ದು ಅಕ್ಟೋಬರ್ 20 ರಂದು ಫೈನಲ್ ಪಂದ್ಯ ನಡೆಯಲಿದೆ.

Previous articleಇಂದು ಅಯೋಧ್ಯೆಗೆ ಮೋದಿ ಭೇಟಿ
Next articleಕನ್ನಡ ಸಾಹಿತ್ಯ ಪರಿಷತ್ತು‌ ಬಗ್ಗೆ ಗೌರವವಿರಲಿ – ದರಸಗುಪ್ಪೆ ಧನಂಜಯ