Home Advertisement
Home ನಮ್ಮ ಜಿಲ್ಲೆ ಗದಗ `ಮಹಾ ಪ್ರೇಮ’ ವಾಯವ್ಯ ಸಾರಿಗೆ ಎಡವಟ್ಟು

`ಮಹಾ ಪ್ರೇಮ’ ವಾಯವ್ಯ ಸಾರಿಗೆ ಎಡವಟ್ಟು

0
158
ಬಸ್‌ ಟಿಕೆಟ್

ಗದಗ: ಮುದ್ರಣ ಕಾಶಿ, ಸಹಕಾರಿ ರಂಗದ ತೊಟ್ಟಿಲು ಖ್ಯಾತಿಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದ ಸಾರಿಗೆ ಬಸ್ಸುಗಳಲ್ಲಿ ನೀಡುವ ಟಿಕೆಟ್‌ಗಳಲ್ಲಿ ಮಹಾರಾಷ್ಟ್ರ ಸಾರಿಗೆ ಪರಿವಾಹನ ಎಂದು ಮುದ್ರಿಸಿದ ಟಿಕೆಟ್‌ಗಳನ್ನು ನೀಡುವ ಮೂಲಕ ಮಹಾರಾಷ್ಟ್ರ ಪ್ರೇಮವನ್ನು ಮೆರೆದಿದ್ದು ಕನ್ನಡಿಗರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಮುಂಡರಗಿ ತಾಲೂಕನ ಅತ್ತಿಕಟ್ಟಿ, ಡೋಣಿ, ಡೋಣಿ ತಾಂಡಾಗಳಿಂದ ಗದಗಕ್ಕೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮಹಾರಾಷ್ಟ್ರ ಸಾರಿಗೆ ಪರಿವಾಹನ ಎಂದು ಮುದ್ರಿಸಿರುವ ಟಿಕೇಟ್‌ಗಳನ್ನು ನೀಡಲಾಗುತ್ತಿದೆ. ಪ್ರಯಾಣಿಕರಿಗೆ ನೀಡಿದ ಟಿಕೆಟ್‌ಗಳಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಿಸಿರುವದು ಕನ್ನಡಿಗರು, ಕನ್ನಡ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ಏಕೀಕರಣಕ್ಕೆ ವಿಶಿಷ್ಟ ಕೊಡುಗೆ ನೀಡಿದ ಗದಗ ಜಿಲ್ಲೆಯಲ್ಲಿಯೇ ಕನ್ನಡಕ್ಕೆ, ಕರ್ನಾಟಕಕ್ಕೆ ಇಂತಹ ದುಸ್ಥಿತಿ ಬಂದಿದ್ದು ಸರಿಯಲ್ಲ. ನಾಡದ್ರೋಹಿ ಕಾರ್ಯದಲ್ಲಿ ನಿರತರಾಗಿರುವ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಕನ್ನಡಪರ ಸಂಘ ಸಂಸ್ಥೆಗಳು ಆಗ್ರಹಿಸಿವೆ.