Home Advertisement
Home ತಾಜಾ ಸುದ್ದಿ ಮಹಾ ಡಿಸಿಎಂ ಶಿಂದೆಯನ್ನು ಕಾರಲ್ಲೇ ಸ್ಫೋಟಿಸುವ ಬೆದರಿಕೆ

ಮಹಾ ಡಿಸಿಎಂ ಶಿಂದೆಯನ್ನು ಕಾರಲ್ಲೇ ಸ್ಫೋಟಿಸುವ ಬೆದರಿಕೆ

0
96

ನವದೆಹಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಗೋರೆಗಾಂವ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ಬೆದರಿಕೆ ಪತ್ರ ರವಾನಿಸಿದ್ದಾನೆ. ಶಿಂದೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಬಾಂಬ್ ಸ್ಫೋಟ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಸಚಿವಾಲಯ ಮತ್ತು ಜೆಜೆ ಮಾರ್ಗ ಪೊಲೀಸ್ ಠಾಣೆಗಳಿಗೂ ಈ ರೀತಿ ಬೆದರಿಕೆ ಪತ್ರ ರವಾನಿಸಲಾಗಿದೆ. ಈ ರೀತಿಯ ಬೆದರಿಕೆ ಹಾಕಿದ ವ್ಯಕ್ತಿ ಒಬ್ಬನೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂದು ಗೊತ್ತಾಗಿಲ್ಲ. ಈಗಾಗಲೇ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತ ವ್ಯಕ್ತಿಯ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.

Previous articleಮುನಿರತ್ನ ಜಾತಿ ನಿಂದನೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Next articleಬೇಟೆಗಾರರ ಉರುಳಿಗೆ ಸಿಲುಕಿ ಚಿರತೆ ಸಾವು