Home Advertisement
Home ತಾಜಾ ಸುದ್ದಿ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಟೆಂಟ್​​ಗಳು

ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಟೆಂಟ್​​ಗಳು

0
101

ಪ್ರಯಾಗ್​ರಾಜ್: ಮಹಾ ಕುಂಭಮೇಳದ ಟೆಂಟ್‌ ಸಿಟಿಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಭಾರೀ ಅಗ್ನಿ ಅವಗಢ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಟೆಂಟ್​​ಗಳು ಹೊತ್ತಿ ಉರಿದಿದ್ದು, ಅಕ್ಕಪಕ್ಕದ ಡೇರೆಗಳಿಗೂ ಅಗ್ನಿ ಜ್ವಾಲೆ ವ್ಯಾಪಿಸಿದೆ.
ಮಹಾ ಕುಂಭಮೇಳದ ಸೆಕ್ಟರ್‌ 19ರಲ್ಲಿ 2 ಸಿಲಿಂಡರ್‌ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದ್ದು, ಸೆಕ್ಟರ್‌ 20ಕ್ಕೂ ಬೆಂಕಿ ವ್ಯಾಪಿಸಿದೆ. ಆದರೆ ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು ಬೆಂಕಿ ನಂದಿಸಿದ್ದಾರೆ.
“ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ ಎರಡು-ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಶಿಬಿರಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ. ಎಲ್ಲಾ ಜನರು ಸುರಕ್ಷಿತವಾಗಿದ್ದಾರೆ ಮತ್ತು ಯಾರೂ ಗಾಯಗೊಂಡಿಲ್ಲ. ತನಿಖೆ ನಡೆಸಲಾಗುವುದು ಎಂದು ಎಡಿಜಿ ಭಾನು ಭಾಸ್ಕರ್ ಹೇಳಿದ್ದಾರೆ.

Previous articleಕಾಂಗ್ರೆಸ್‌ನಲ್ಲಿ ಒಳಬೇಗುದಿ, ಆಡಳಿತದಲ್ಲಿ ಅರಾಜಕತೆ
Next articleಯಡಿಯೂರಪ್ಪನವರನ್ನು ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಅಂತಾನೆ…