ಮಹಾರಾಷ್ಟ್ರ ಸಚಿವರು ಬಂದರೆ ಅಧಿಕಾರಿಗಳು ಕ್ರಮ ಜರುಗಿಸ್ತಾರೆ: ಸಿಎಂ ಎಚ್ಚರಿಕೆ

0
11
ಸಿಎಂ

ಹುಬ್ಬಳ್ಳಿ : ಮಹಾರಾಷ್ಟ್ರ ಸಚಿವರು ಬೆಳಗಾವಿ ಗಡಿ ಪ್ರದೇಶಕ್ಕೆ ಬರುವುದು ಬೇಡ. ಅವರು ಬಂದರೆ ನಮ್ಮ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗೆ ಪ್ರಯಾಣಿಸುವ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬರುವುದು ಬೇಡ ಎಂದು ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಲಿಖಿತವಾಗಿ ಆಯ್ಕೆ ಮಾಡಿದರು. ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರ ನಡುವೆ ಸಾಮರಸ್ಯವಿದೆ. ಅದಕ್ಕೆ ಧಕ್ಕೆ ಆಗಬಾರದು. ಗಡಿ ವಿಚಾರ ಮುಗಿದು ಹೋಗಿರುವ ಅಧ್ಯಾಯ.ಆದರೂ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಪದೇ ಪದೇ ವಿಷಯ ಪ್ರಸ್ತಾಪಿಸಿ ಗಡಿ ಭಾಗದಲ್ಲಿ ಅಶಾಂತಿ ಸೃಷ್ಠಿಸುವ ಯತ್ನ ಮಾಡುತ್ತಿದೆ ಎಂದು ಹೇಳಿದರು.

Previous articleಅಹವಾಲು ಸ್ವೀಕರಿಸಿ ಬೆಂಗಳೂರಿಗೆ ತೆರಳಿದ ಸಿಎಂ
Next articleಕೆಲವರು ಬಿಜೆಪಿ ಏಜೆಂಟರ್ ಆಗಿ ವರ್ತಿಸುತ್ತಿದ್ದಾರೆ: ದೀಪಕ ಚಿಂಚೋರೆ