ಇಳಕಲ್: ಗುರುವಾರವೂ ಮುಂದುವರೆದ ಸತತ ಮಳೆಯಿಂದಾಗಿ ಎರಡು ಮನೆಗಳು ಕುಸಿದಿವೆ.
ನಗರದಲ್ಲಿ ಒಂದು ಮನೆ ಬಿದ್ದರೆ, ತಾಲೂಕಿನ ಗೊರಬಾಳ ಗ್ರಾಮದಲ್ಲಿ ಮತ್ತೊಂದು ಮನೆ ಬಿದ್ದಿದೆ ಎಂದು ತಹಶೀಲ್ದಾರ್ ಕಚೇರಿಯ ಪ್ರಕಾಶ ವಜ್ಜಲ ಮಾಹಿತಿ ನೀಡಿದ್ದಾರೆ. ನಗರದ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.