ಬೆಂಗಳೂರು: “ಕೊಲ್ಲೂರು ಮೂಕಾಂಬಿಕಾ ಕಾರಿಡಾರ್” ಗೆ ಪ್ರಸ್ತಾವನೆ ಸಲ್ಲಿಸಿದ್ದು ತಾಯಿಯ ಕೃಪಾಶೀರ್ವಾದದಿಂದ ಶೀಘ್ರದಲ್ಲೇ ಇದಕ್ಕೆ ಅನುಮೋದನೆ ದೊರಕುವ ಆಶಾಭಾವ ಮೂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ
ಬೈಂದೂರಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾಡು ಅತೀವ ಮಳೆಯಿಂದ ಅತಿವೃಷ್ಟೀ ಮತ್ತು ಅನಾವೃಷ್ಟೀ ಎದುರಿಸುತ್ತಿದ್ದು ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ರಕ್ಷಿಸುವಂತೆ ಪ್ರಾರ್ಥಿಸಲಾಯಿತು. ಉತ್ತಮ ವರ್ಷಧಾರೆಯಿಂದ ಜಲಾಶಯಗಳು ಭರ್ತಿಯಾಗಿ ನಾಡಿನ ರೈತಾಪಿ ವರ್ಗದಲ್ಲಿ ಹೊಸ ಮಂದಹಾಸ ಮೂಡಿದ್ದು ಇದೇ ರೀತಿ ನಾಡು ಸುಭಿಕ್ಷವಾಗಿ ತುಂಬಿರಲಿ ಎಂದು ವಿಶೇಷವಾಗಿ ಕೇಳಿಕೊಳ್ಳಲಾಯಿತು. ಶರಾವತಿ ಹಿನ್ನೀರಿಗೆ ಸುಮಾರು 423.15 ಕೋಟಿ ವೆಚ್ಚದಲ್ಲಿ ಅಂಬಾರಗೋಡ್ಲು ಯಿಂದ ಕಳಸವಳ್ಳಿ ನಡುವೆ ನಿರ್ಮಾಣವಾಗುತ್ತಿರುವ 2.25ಕಿ.ಮೀ ಉದ್ದದ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ನಡೆದಿದ್ದು, ಮಲೆನಾಡಿಗರ ಶತಮಾನಗಳ ಕಾತರತಗೆ ತೆರೆ ಬಿಳಲು ಕ್ಷಣಗಣನೆ ಆರಂಭವಾಗಿದೆ. ವಿಶ್ವದರ್ಜೆಯ ಸೇತುವೆ ನಿರ್ಮಾಣ ಮಾಡುವ ಮೂಲಕ ನಾಡಿಗೆ ಬೆಳಕು ನೀಡಿದವರ ಹಿತ ಕಾಯಲು ಬದ್ಧರಾಗಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು ದೊರಕಲಿದೆ. ಇತಿಹಾಸ ಪ್ರಸಿದ್ಧ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಸುಲಲಿತ ದರ್ಶನಕ್ಕೆ ಅನುಕೂಲವಾಗಲಿದೆ. ತುರ್ತು ಸಂದರ್ಭಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿದ್ದ ಭಯದ ವಾತಾವರಣ ದೂರವಾಗಲಿದೆ. ಒಂದು ರೀತಿಯ ಸಾರ್ಥಕ ಭಾವ ಮನೆ ಮಾಡಿದೆ ಎಂದರು