ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಇಬ್ಬರು ಅಪ್ರಾಪ್ತರ ಸಾವು

0
18

ಗದಗ: ಜಿಲ್ಲೆಯ ರೋಣ, ಅಬ್ಬಿಗೇರಿ ಗ್ರಾಮಗಳ ಮಧ್ಯೆ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರಿ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಇನ್ನೋರ್ವ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟ ಅಪ್ರಾಪ್ತ ಬಾಲಕರನ್ನು ಅನೂಪ ಇಟಗಿ(15), ಶ್ರೀಶಾಂತ ಗಡಗಿ(15) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ಬಾಲಕ ಮೌನೇಶನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರೂ ಬಾಲಕರು ಬೈಕ್ ಮೇಲೆ ಅಬ್ಬಿಗೇರಿ ಗ್ರಾಮದ ಹೊರವಲಯದಲ್ಲಿರುವ ಕಲಾಕಾಶಿ ಬಳಿಯಲ್ಲಿ ಈಜಲು ಹೋಗಿ ವಾಪಸ್ಸು ಬರುವಾಗ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಅಪ್ರಾಪ್ತ ಬಾಲಕರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಬಿದ್ದಿವೆ. ಅಪಘಾತದ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleನಾಲ್ಕು ವಾಹನಗಳಿಗೆ ಬೆಂಕಿ
Next articleಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ನಿಧನ