ಮನ್‌ ಕೀ ಬಾತ್‌ನಲ್ಲಿ ಪರಿಸರ ಹಾಗೂ ಕನ್ನಡ ಪ್ರೇಮಿ ಸುರೇಶ್‌ ಕುಮಾರ ಬಗ್ಗೆ ಶ್ಲಾಘನೆ

0
21
SURESH KUMAR

ಬೆಂಗಳೂರಿನ ಸಹಕಾರ ನಗರದ ನಿವಾಸಿ, ಪರಿಸರ ಮತ್ತು ಕನ್ನಡ ಪ್ರೇಮಿ ಸುರೇಶ್ ಕುಮಾರ್ ರವರ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಹಾಗೂ ಪರಿಸರ ಕಾಳಜಿಯನ್ನು ಪ್ರಧಾನಮಂತ್ರಿಯವರು ತಮ್ಮ ಇಂದಿನ ಮನ್ ಕೀ ಬಾತ್ ನಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಉತ್ಸಾಹ ತುಂಬಿದೆ. ಸಹಕಾರನಗರದ ಒಂದು ಅರಣ್ಯವನ್ನು ಅವರು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ. 20 ವರ್ಷಗಳ ಹಿಂದೆ ಅವರು ನೆಟ್ಟ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ. ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನೂ ಮಾಡಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಸಹಕಾರ ನಗರದಲ್ಲಿ ಒಂದು ಬಸ್ ತಂಗುದಾಣವನ್ನು ಸಹ ನಿರ್ಮಿಸಿದ್ದಾರೆ. ನೂರಾರು ಜನರಿಗೆ ಕನ್ನಡ ಭಾಷೆಯಲ್ಲಿ ಬರೆಯಲಾಗಿರುವ ಫಲಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

Previous articleಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ
Next articleಭಗತ್‌ಸಿಂಗ್‌ ಪಾತ್ರದ ಅಭ್ಯಾಸದ ವೇಳೆ – ಬಾಲಕ ನೇಣಿಗೆ ಶರಣು