Home Advertisement
Home ತಾಜಾ ಸುದ್ದಿ ಮದ್ದು ತಯಾರಿಕೆ ವೇಳೆ ಆಕಸ್ಮಿಕ ಸ್ಫೋಟ

ಮದ್ದು ತಯಾರಿಕೆ ವೇಳೆ ಆಕಸ್ಮಿಕ ಸ್ಫೋಟ

0
53

ಗೋಕಾಕ: ಪಂಚಮಿ ಹಬ್ಬಕ್ಕೆ ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ವ್ಯಕ್ತಿಯೊರ್ವ ಬೆಂಕಿಗೆ ಆಹುತಿಯಾಗಿರುವ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38) ಮೃತ ವ್ಯಕ್ತಿ. ಮಲ್ಲಪ್ಪ ಪಂಚಮಿ ಹಬ್ಬಕ್ಕಾಗಿ ಮದ್ದು ಹಾರಿಸಲು ತಯಾರು ಮಾಡವಾಗ ಅವಘಡ ಸಂಭವಿಸಿದೆ. ಏಕಾಏಕಿ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ಮಲ್ಲಪ್ಪ ಹೊರಬರಲಾಗದೇ ಸುಟ್ಟು ಭಸ್ಮವಾಗಿದ್ದಾರೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Previous articleಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲು
Next articleನನ್ನ ಮಾತು ಬೆದರಿಕೆಯಂತೆ ಕಂಡರೆ ನಾವೇನು ಮಾಡಲಾಗುತ್ತೆ?