ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಲೋಕಸಭೆಯಲ್ಲಿ ಮಧ್ಯರಾತ್ರಿ ಒಪ್ಪಿಗೆ

0
41

ನವದೆಹಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಲೋಕಸಭೆ ಗುರುವಾರ ಒಪ್ಪಿಗೆ ನೀಡಿದೆ. ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ನಡೆದ ಸುಧೀರ್ಘ ಚರ್ಚೆ ಹಾಗೂ ಮತದಾನದ ನಂತರ ಲೋಕಸಭೆಯಲ್ಲಿ ಮಧ್ಯರಾತ್ರಿ ಮಣಿಪುರದ ಬಗ್ಗೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. ೪೧ ನಿಮಿಷಗಳ ಕಾಲ ಚರ್ಚೆಯ ನಂತರ ಸರ್ವಾನುಮತದಿಂದ ಮಣಿಪುರದಲ್ಲಿ ಜಾರಿ ಮಾಡಲಾಗಿರುವ ರಾಷ್ಟ್ರಪತಿ ಆಳ್ವಿಕೆಗೆ ಲೋಕಸಭೆ ಅನುಮೋದನೆ ನೀಡಿತು.

Previous articleವಕ್ಫ್ ತಿದ್ದುಪಡಿ ಬಡವರಿಗೆ ವರದಾನ
Next articleದುಬಾರಿ ತೆರಿಗೆ ಮೂಲಕ ಟ್ರಂಪ್ ದೊಡ್ಡ ಜೂಜಾಟ