ಮಂತ್ರಾಲಯ ಶ್ರೀರಾಯರ ಮಠದ ಹುಂಡಿಯಲ್ಲಿ 3.13 ಕೋಟಿ ಹಣ ಸಂಗ್ರಹ

0
16
ಮಂತ್ರಾಲಯ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳವರ ಹುಂಡಿಗೆ ಭಕ್ತರಿಂದ ಒಟ್ಟು 3.13 ಕೋಟಿ ರೂಪಾಯಿಗಳು ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಶ್ರೀ ಮಠದ ಭಕ್ತರು ಹಾಗೂ ಸಿಬ್ಬಂದಿಗಳು ನವೆಂಬರ್ ತಿಂಗಳ ಸೇರಿದಂತೆ 36 ದಿನಗಳ ಕಾಲ ರಾಯರ ಹುಂಡಿಯಲ್ಲಿ ಸಂಗ್ರಹಣೆ ಆಗಿರುವಂತ ಕಾಣಿಕೆ ಹಣವನ್ನು ಎಣಿಕೆ ಕಾರ್ಯ ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಒಟ್ಟು 3,13,33,093 ಮೊತ್ತದ ಹಣ ಸಂಗ್ರಹವಾಗಿದೆ. ಇನ್ನೂ ನಾಣ್ಯಗಳ ಎಣಿಕೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.

Previous articleಬಿಜೆಪಿ ಸರ್ಕಾರಕ್ಕೆ ಕಣ್ಣು-ಕಿವಿಯೇ ಇಲ್ಲ: ಡಿಕೆಶಿ ಲೇವಡಿ
Next articleನಿವೃತ್ತ ಶಿಕ್ಷಕ ರಾಯನಗೌಡ ಪಾಟೀಲ್ ಇನ್ನಿಲ್ಲ