ಮಂಡ್ಯ : ಒಕ್ಕಲಿಗ ಸಮುದಾಯವನ್ನು ಸಂಸ್ಕೃತಿ ಹೀನರು ಎಂದು ಅವಮಾನಿಸಿರುವ ಪ್ರೊ.ಕೆ.ಎಸ್ ಭಗವಾನ್ ವಿರುದ್ಧ ಒಕ್ಕಲಿಗರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ರೈತ ಸಭಾಂಗಣದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರುಅಖಂಡ ಕರ್ನಾಟಕ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪ್ರತಿಭಟಿಸಿ ಪ್ರೊ ಕೆ.ಎಸ್, ಭಗವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರು ನೆಲದ ಸಂಸ್ಕೃತಿಯ ಪ್ರತೀಕ, ಭೂಮಿ ನಂಬಿ ಬದುಕು ಮಾಡುತ್ತಿದ್ದು. ಸುಸಂಸ್ಕೃತ ಬದುಕು ನಡೆಸುತ್ತಿದ್ದಾರೆ, ಆದರೆ ಒಕ್ಕಲಿಗ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಜಾತಿ ಜಾತಿಗಳ ನಡುವೆ ಸಂಘರ್ಷ ವನ್ನುಂಟು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಹೇಳಿದರು.
ಅವಹೇಳನ ಮಾತನಾಡಿ ನಾನು ಹೇಳುತ್ತಿಲ್ಲ,ಬೇರೆಯವರು ಹೇಳಿದ್ದಾರೆ ಎಂದು ಹೇಳುವ ಮೂಲಕ ಕೆ.ಎಸ್ ಭಗವಾನ್ ಸಮಾಜದಲ್ಲಿ ಸೌಹಾರ್ದತೆ ಕದಡಲು ಮುಂದಾಗಿದ್ದು, ಇಂತವರು ಸಮಾಜ ವಿರೋಧಿ ಜೊತೆಗೆ ಮಾನವ ವಿರೋಧಿಯಾಗಿದ್ದಾರೆಂದು ಕಿಡಿಕಾರಿದರು.
ಸಮುದಾಯದ ವಿರುದ್ಧ ಆಡಿರುವ ಅವಹೇಳನ ಮಾತನ್ನು ವಾಪಸ್ ಪಡೆಯಬೇಕು,ಇಲ್ಲದಿದ್ದರೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಈ ಕೂಡಲೇ ಒಕ್ಕಲಿಗ ಸಮುದಾಯದ ಕ್ಷಮೆ ಯಾಚಿಸಬೇಕು, ಗಡಿಪಾರು ಸೇರಿದಂತೆ ಸರ್ಕಾರ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್,ಸಂಘದ ಅಧ್ಯಕ್ಷ ಕೆ ಸಿ ರವೀಂದ್ರ,ಮಹಿಳಾ ಘಟಕದ ಅಧ್ಯಕ್ಷೆ
ಸುಜಾತ ಕೃಷ್ಣ,10 ಟಿ. ವಿ ಕೃಷ್ಣ, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಪೂಜಾ ಶಾಮಿಯಾನ ರಮೇಶ್ ನೇತೃತ್ವ ವಹಿಸಿದ್ದರು.