ಭಾರತ ಜೋಡೋ ಅಲ್ಲ, ಸಿದ್ದರಾಮಯ್ಯ, ಡಿಕೆಶಿ ಜೋಡೊ ಯಾತ್ರೆ: ಅರುಣ್ ಸಿಂಗ್ ವ್ಯಂಗ್ಯ

0
20
arunsingh

ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಡೆಸಿದ ಯಾತ್ರೆ ಭಾರತ ಜೋಡೋ ಅಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಜೋಡೋ ಯಾತ್ರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ವ್ಯಂಗ್ಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜೋಡೊ ಯಾತ್ರೆ ರಾಹುಲ್ ಗಾಂಧಿ ಅವರ ಮುಂಜಾನೆ ಮತ್ತು ಸಂಜೆಯ ವಾಕಿಂಗ್ ಯಾತ್ರೆಯಾಗಿದೆ ಅಷ್ಟೇ. ಇದರಲ್ಲಿ ದೇಶದ ಜನರ ಹಿತ ಚಿಂತನೆ ಅಡಗಿಲ್ಲ. ಕಂಪ್ಲೀಟ್ ಫ್ಲಾಪ್ ಶೋ ಎಂದರು.
ಶೇ. 40 ಭ್ರಷ್ಟಾಚಾರ ಆರೋಪ ನಿರಾಧಾರ. ನಿರಾಧಾರ ಆರೋಪಕ್ಕೆ ಏನು ಪ್ರತಿಕ್ರಿಯಿಸಬೇಕು. ದಾಖಲೆ ಒದಗಿಸಿ ತನಿಖೆ ನಡೆಸುತ್ತೇವೆ ಎಂದರೆ ಕಾಂಗ್ರೆಸ್‌ನವರು ದಾಖಲೆ ಒದಗಿಸುತ್ತಿಲ್ಲ. ಆರೋಪ ಮಾಡಿದವರು ದಾಖಲೆ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.

Previous articleಯತ್ನಾಳ್ ನಮ್ಮ ಪಕ್ಷದ ನಾಯಕನಲ್ಲ: ಅರುಣ್ ಸಿಂಗ್
Next articleಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ