ಲಂಡನ್: ವಿಂಬಲ್ಡನ್‌ನ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ರೋಹನ್ ಬೊಪಣ್ಣ ಹಾಗೂ ಮ್ಯಾತ್ಯು ಎಬ್ಡೆನ್ ಜೋಡಿಯು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಈ ಜೋಡಿ, ಎರಡನೇ ಸುತ್ತಿನ ಪಂದ್ಯದಲ್ಲಿ ಬ್ರಿಟಿಷ್ ಎದುರಾಳಿಗಳಾದ ಜಾಕೋಬ್ ಫಿಯರ್ನ್ಲೆ ಹಾಗೂ ಜೊಹನಸ್ ಮೊನ್ಡೆ ಅವರನ್ನು 7-5, 6-3 ನೇರ ಸೆಟ್‌ಗಳಿಂದ ಮಣಿಸಿತು.ಇದರ ಬೆನ್ನಲ್ಲೇ ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು ಭಾರತದ ಸೂಪರ್ ಸ್ಟಾರ್ ಎಂದು ಟ್ವೀಟ್ ಮಾಡಿ ಗೌರವ ಸೂಚಿಸಿದೆ. ಇದು ಕನ್ನಡ ಟೆನಿಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.