ಭರವಸೆಗೆ ಬರವಿಲ್ಲ

0
39
ನಳಿನ್‌ಕುಮಾರ್ ಕಟೀಲ್

ಬೆಂಗಳೂರು: ಭರವಸೆಗೆ ಬರವಿಲ್ಲ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ “ಈ #ATMSarkara ದಲ್ಲಿ ಭರವಸೆಗೆ ಬರವಿಲ್ಲ, ಗ್ಯಾರಂಟಿಗಳ ಈಡೇರಿಕೆ ಇಲ್ಲ! ರಾಜ್ಯದ ರೈತರ ಅಕ್ಕಿಗೆ ತಿರಸ್ಕಾರ, ಅನ್ನಭಾಗ್ಯ ಯೋಜನೆಗೆ ಕನ್ನ. ಅಕ್ಕಿ ಬದಲು ಹಣ ಕೊಡ್ತೀವಿ ಎಂದು ಕೈ ಎತ್ತಿದ್ದೆ ಸಿದ್ದರಾಮಯ್ಯ ಸರ್ಕಾರದ ಸಾಧನೆಯೇ? ತುಘಲಕ್ ಸರ್ಕಾರದ ದಿನಗಳು ನೂರು, ಸಮಸ್ಯೆಗಳು ಸಾವಿರಾರು!
ಅತ್ತ ದೆಹಲಿ ದೊರೆಗಳಿಗೆ ಕಪ್ಪ ಕಾಣಿಕೆ ಸಂಗ್ರಹಕ್ಕೆ ರಾಜ್ಯದ ಅಧಿಕಾರಿಗಳಿಗೆ ಟಾಸ್ಕ್. ಇತ್ತ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ, ಅಂದಾಜು ನೂರು ಅನ್ನದಾತರ ಬಲಿ ಪಡೆದ ಕಾಂಗ್ರೆಸ್! ರಾಜ್ಯದಲ್ಲಿ ಬೆಲೆ ಏರಿಕೆ ಉಚಿತ, ಸಾವು ಖಚಿತ, ಲೂಟಿ ನಿಶ್ಚಿತ. ಇದೇ ಕಾಂಗ್ರೆಸ್ ನೂರು ದಿನಗಳ ಸಾಧನೆಯೇ ಡಿ ಕೆ ಶಿವಕುಮಾರ ಅವರೇ? ಚುನಾವಣೆ ಸಮಯದಲ್ಲಿ ನಂದಿನಿ ಮೇಲೆ ಮಮಕಾರ, ಅಧಿಕಾರಕ್ಕೆ ಬರುತ್ತಲೇ ತಿರಸ್ಕಾರ! ಗ್ರಾಹಕರಿಗೆ ದರ ಏರಿಕೆ, ರೈತರಿಗೆ ಪ್ರೋತ್ಸಾಹಧನ ಇಳಿಕೆ. ಮಳಿಗೆ ವಿಸ್ತರಣೆಗೆ ತಡೆ. ಒಟ್ಟಾರೆ ನಂದಿನಿಯ ವಿಚಾರದಲ್ಲಿ ನಾಡಿಗೆ ದ್ರೋಹ! ವಿದ್ಯುತ್, ಅಕ್ಕಿ, ತರಕಾರಿ ದರ ಏರಿಕೆ. ಅನ್ನದಾತನಿಗೆ ವರವಾಗಿದ್ದ ಕೃಷಿ ಸಮ್ಮಾನ್ ಸ್ಥಗಿತ! ಇದೇನಾ ನಿಮ್ಮ ಸಾಧನೆ? ಜೈನ ಮುನಿ ಹತ್ಯೆ, ಹಿಂದೂ ಕಾರ್ಯಕರ್ತರ ಕೊಲೆ.
ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಕಸರತ್ತು. ಸಾಕ್ಷಿ ಸಮೇತ ಸಿಕ್ಕಿಬಿದ್ದ ಉಗ್ರರಿಗೂ ಕ್ಲೀನ್‌ಚಿಟ್! ವಿದ್ಯಾರ್ಥಿನಿಯರ ಮಾನಹಾನಿ ಮಕ್ಕಳಾಟಿಕೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ವಾಪಸಾತಿಗೆ ಕಸರತ್ತು! ಪರಮೇಶ್ವರ ಅವರೇ ಇದೇನಾ ನಿಮ್ಮ ಸಾಧನೆ? ಅಂಗನವಾಡಿಗೆ ಕೊಳೆತ ಮೊಟ್ಟೆ, ಸಾರ್ವಜನಿಕರಿಗೆ ಕಲುಷಿತ ನೀರು. ನೀರಿನಿಂದ ಪ್ರಾಣ ಹೋದರೂ ಕೇಳುವವರಿಲ್ಲ! ಕೃಷಿ ಸಚಿವರ ಲಂಚಾವತಾರದ ವಿರುದ್ಧವೇ ಇಲಾಖೆ ಅಧಿಕಾರಿಗಳ ದೂರು ಗುತ್ತಿಗೆದಾರರ ಸಂಘದಿಂದ ಬಿಲ್ ಗಾಗಿ ಕಮಿಷನ್ ಆರೋಪ ವರ್ಗಾವಣೆ ದಂಧೆಯ ಬಗ್ಗೆ ಶಾಸಕರ ಬಣದಲ್ಲಿ ಹೊಡೆದಾಟ. ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ‌ 100 ದಿನಗಳ ಸಾಧನೆ? ಅವಾಸ್ತವಿಕ ಗ್ಯಾರಂಟಿಗಾಗಿ ಪರಿಶಿಷ್ಟ ಸಮುದಾಯದ ಹಣಕ್ಕೆ ಕನ್ನ. ರಾಜಕೀಯಕ್ಕಾಗಿ ಕಾವೇರಿ ನೀರಿಗೆ ಕನ್ನ, ಕಾವೇರಿ ಕೊಳ್ಳದ ಜನರಿಗೆ ಹೊಸ ಬೆಳೆ ಬೆಳೆಯದಂತೆ ತಾಕೀತು. ಬರಗಾಲದಲ್ಲೂ ಕಾವೇರಿ ನೀರು ಉಳಿಸಿಕೊಳ್ಳದೇ, ಒಟ್ಟಾರೆ ಕನ್ನಡಿಗರಿಗೆ ಮಹಾದ್ರೋಹ! 100 ದಿನದಲ್ಲಿ ಸಾವಿರಾರು ಸಮಸ್ಯೆ ಸೃಷ್ಟಿಸಿ, ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಾಧನೆಯ ಎಂದು ಪ್ರಶ್ನಿಸಿದ್ದಾರೆ.

Previous articleಮೈಸೂರು – ಹುಬ್ಬಳ್ಳಿ ಮಧ್ಯೆ ಇಂದು ಫೈನಲ್​ ಕಾದಾಟ
Next articleನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರ