ಪರೀಕ್ಷೆ ಬರೆಯಲು ಜನಿವಾರ ತಗೆಸಿದ್ದಕ್ಕೆ ಖಂಡನೆ
ಕೊಪ್ಪಳ: ಸಿಇಟಿ ಪರೀಕ್ಷೆ ಬರೆಯಲು ಜನಿವಾರ ತೆಗೆಸಿದ್ದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಬ್ರಾಹ್ಮಣ ಸಮುದಾಯದವರು ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆದಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಗುರುರಾಜ ಜೋಶಿ, ಮಹಾಸಭಾ ಮತ್ತು ವಿಪ್ರ ಮುಖಂಡರಾದ ಎಚ್.ಬಿ.ದೇಶಪಾಂಡೆ, ವೇಣುಗೋಪಾಲಾಚಾರ್ ಜಹಗೀರದಾರ್, ಜಗನ್ನಾಥ ಹುನಗುಂದ, ಪ್ರಾಣೇಶ್ ಮಾದಿನೂರ, ಡಾ.ಕೆ.ಜಿ.ಕುಲಕರ್ಣಿ, ಡಿ.ವಿ.ಜೋಶಿ, ಸುರೇಶ್ ಗಾವರಾಳ, ಅಪ್ಪಣ್ಣ ಪದಕಿ, ರಾಘವೆಂದ್ರ ಕುಲಕರ್ಣಿ, ರಾಮಮೂರ್ತಿ ಸಿದ್ಧಾಂತಿ, ಭೀಮಸೇನ ಜೋಷಿ, ಮಂಜುನಾಥ ಹಳ್ಳಿಕೇರಿ, ಅರವಿಂದ ಕುಲಕರ್ಣಿ, ಪ್ರಕಾಶ್ ಜೋಶಿ, ಪ್ರಶಾಂತ ಕುಲಕರ್ಣಿ, ವೈಷ್ಣವಿ ಹುಲಗಿ, ಲತಾ ಮುಧೋಳ, ರಾಘವೇಂದ್ರ ನರಗುಂದ, ರಮೇಶ ಜಹಗೀರದಾರ, ನಾಗರಾಜ್ ಸಿದ್ಧಾಂತಿ, ಅನಿಲ್ ಕುಲಕರ್ಣಿ, ನಾಗೇಶ್ವರಾವ್ ದೇಶಪಾಂಡೆ ಇದ್ದರು.



























