ಬ್ಯಾಟಿಂಗ್ ಮಾಂತ್ರಿಕನ 300ನೇ ಏಕದಿನ ಪಂದ್ಯ

0
16

ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ಹಾಗೂ ವಿಶ್ವದ 22ನೇ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ

ನವದೆಹಲಿ: ಇಂದು ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡ ಮುಖಾಮುಖಿಯಾಗಲಿದ್ದು, ಈ ಪಂದ್ಯವು ಕೊಹ್ಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.
ವಿರಾಟ್ ಕೊಹ್ಲಿ ಅವರು ಇಂದು ನಡೆಯುವ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದರೆ ‘ತ್ರಿಶತಕ’ ಪೂರೈಸಲಿದ್ದಾರೆ. ಈ ಪಂದ್ಯವು ಕೊಹ್ಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಲಿದ್ದು ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ಹಾಗೂ ವಿಶ್ವದ 22ನೇ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ. ಈ ಆಟವನ್ನು ವಿಕ್ಷಿಸಲು ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ದುಬೈಗೆ ಆಗಮಿಸಿದ್ದು, ಇಂದು ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

Previous articleಕೊಪ್ಪಳ ಕಾರ್ಖಾನೆ: ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಬಂದಿಲ್ಲ
Next articleಫಲಾನುಭವಿಗಳಿಗೆ ಸಿಗದ ಹಣ, ಸಮಿತಿಯ ಸದಸ್ಯರಿಗೆ