ಮಂಗಳೂರು: ನಗರದ ಕುಲಶೇಖರ ಬಳಿ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ ವೇಳೆ ಬಸ್ ಹರಿದು
ಒಂದು ಬೈಕ್‌ನ ಸವಾರ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಮೃತ ಸವಾರ ಚಂದನ್(20) ಎಂದು ಹೆಸರಿಸಲಾಗಿದೆ. ಕುಲಶೇಖರ ಶಾಲೆ ಬಳಿ ಬೆಳಗ್ಗೆ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಒಂದು ಬೈಕ್‌ನ ಸವಾರ ಚಂದನ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದೇ ವೇಳೆ ಆತನ ಮೇಲೆ ಸಂಚರಿಸುತ್ತಿದ್ದ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಂಚಾರಿ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
                
























