ಬೆಳ್ಳಂಬೆಳಗ್ಗೆ ಬೋನಿಗೆ ಬಿದ್ದ ಚಿರತೆ

0
21

ರಾಯಚೂರು: ಇತ್ತೀಚೆಗೆ ತಾಲ್ಲೂಕಿನ ಮಲಿಯಾಬಾದ್ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಸೆರೆಹಿಡಿದ್ದಿದ್ದಾರೆ.
ಸೆರೆ ಸಿಕ್ಕ ಗಂಡು ಚಿರತೆ 3ರಿಂದ 4 ವರ್ಷದ್ದಾಗಿದೆ. ಆರು ತಿಂಗಳಿಂದ ಬೆಟ್ಟದ ಗುಹೆಯಲ್ಲೇ ವಾಸಿಸುತ್ತಿದ್ದ ಚಿರತೆ, ಆಹಾರಕ್ಕಾಗಿ ಗ್ರಾಮದ ನಾಯಿಗಳು ಹಾಗೂ ಗ್ರಾಮದ ಇತರೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿತ್ತು. ಕೆಲ ದಿನಗಳಿಂದ ಚಿರತೆ ಹೆಜ್ಜೆ ಗುರುತುಗಳು ಮಾತ್ರ ಪತ್ತೆಯಾಗಿದ್ದವು. ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಕ್ಯಾಮೆರಾದಲ್ಲಿ ಚಿರತೆ ಚಲನವಲನವೂ ಸೆರೆಯಾಗಿತ್ತು.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದರು. ಇದೀಗ ಬೋನಿಗೆ ಚಿರತೆ ಬಿದ್ದಿದ್ದು, ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Previous articleಅವರವರ ಭಕುತಿಗೆ ತಕ್ಕಂತೆ ಸಾಗುತಿದೆ ಮಹಾಕುಂಭ ಮೇಳ
Next articleಗ್ಯಾರಂಟಿ ಯೋಜನೆಗಳನ್ನು ಹತ್ತಿಕ್ಕಲು ಬಿಜೆಪಿಯವರಿಂದ ಪ್ರಯತ್ನ