ಬೆಳಗಾವಿ‌ ನಗರಕ್ಕೆ ನುಗ್ಗಿದ ಕಾಡಾನೆ

0
8

ಬೆಳಗಾವಿ: ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಯೊಂದು ಬೆಳಗಾವಿ ಮಹಾನಗರದ ಬಡಾವಣೆಗೆ ನುಗ್ಗಿದ ಘಟನೆ ಬೆಳಗಾವಿಯ ಬಾಟ್ ರಸ್ತೆಯ ಬಸವ ಕಾಲನಿಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಕಾಡಾನೆ, ಬೆಳಗಾವಿಯ ಬಸವ ಕಾಲೋನಿಯಲ್ಲಿ ಕಾಣಿಸಿಕೊಂಡಾಗ,ಅಲ್ಲಿಯ ಕೆಲವರಿಗೆ ಖುಷಿ,ಇನ್ನು ಕೆಲವರಿಗೆ ಹೆದರಿಕೆ, ಆನೆ ಬಂದಿದೆ ಆನೆ,ಎನ್ನುವ ಸುದ್ದಿ ಹರಡಿ ಅಲ್ಲಿ ನೂರಾರು ಜನ ಸೇರಿದ್ರು.ಸೆಲ್ಪಿ, ಮೋಬೈಲ್ ಶೂಟೀಂಗ್ ಮಾಡಿ ಅಲ್ಲಿಯ ಜನ ಎಂಜಾಯ್ ಮಾಡಿದ್ರು. ಕಾಡಾನೆ ಬಡಾವಣೆಗೆ ಬಂತಲ್ಲ ಎಂದು ಅಲ್ಲಿಯ ಕೆಲವು ಜನ ಹೆದರಿ ಫಾರೆಸ್ಟ್ ಆಫೀಸರುಗಳಿಗೆ ಫೋನ್ ಮಾಡಿದ್ರು ಆನೆ ಬಂದಿರುವ ಬಗ್ಗೆ ಮಾಹಿತಿ ನೋಡಿದ್ರು. ತಮ್ಮ ಮನೆಯ ಅಂಗಳದಲ್ಲಿ ಹಿತ್ತಲಲ್ಲಿ ಆನೆ ಓಡಾಡುತ್ತಿರುವದನ್ನು ನೋಡಿದ ಮಕ್ಕಳ ಚಿಲಿಪಿಲಿ ಬಸವ ಕಾಲೋನಿಯಲ್ಲಿ ಸಾಮಾನ್ಯವಾಗಿತ್ತು,ಕಾಕತಿ ಅರಣ್ಯ ಪ್ರದೇಶದಿಂದ ಈ ಆನೆ ಬಹುಶ ನೀರು ಅಥವಾ ಆಹಾರ ಹುಡುಕುತ್ತಾ ಬೆಳಗಾವಿಗೆ ಬಂದಿರಬಹುದು,ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಆನೆಯನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ಶುರು ಮಾಡಿದ್ದಾರೆ.

Previous articleಕೇಂದ್ರದಿಂದ ಕರ್ನಾಟಕಕ್ಕೆ 5,183 ಕೋಟಿ ಬಿಡುಗಡೆ
Next articleಪಕೋಡಾ ಮಾಡುವುದೂ ಕೂಡ ಕಷ್ಟದ ಉದ್ಯೋಗವನ್ನಾಗಿಸಿದ ಕೇಂದ್ರ ಸರ್ಕಾರ!