ಬೆಳಗಾವಿ ದಂಡು ಮಂಡಳಿ ಸಿಇಒ ಅನುಮಾನಾಸ್ಪದ ಸಾವು

0
18

ಬೆಳಗಾವಿ: ದಂಡುಮಂಡಳಿ ಸಿಇಓ ಕೆ. ಆನಂದ ಅವರು ಇಂದು ಬೆಳಗಿನ‌ ಜಾವ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಬೆಳಗಾವಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರು ಸಿಬಿಐ ದಾಳಿ ಎದುರಿಸಿದ್ದರು. ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌‌ನ ತಮಿಳುನಾಡು ಮೂಲದವರು.
ಇಂದು ಬೆಳಗ್ಗೆ ಮನೆಯ ದ್ವಾರ ತೆಗೆಯದೇ ಇರುವಾಗ ಕ್ಯಾಂಪ್ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ಹೋಯಿತು. ನಂತರ ಬಾಗಿಲು ತೆಗೆದು ಒಳ ನುಗ್ಗಿದಾಗ ಅವರ ಶವ ಪತ್ತೆಯಾಯಿತು.
ಎಂ ಎಲ್ ಐ ಅರ್ ಸಿ ಬ್ರಿಗೇಡಿಯರ್ ಮತ್ತು ಖಡೇಬಜಾರ್ ಎಸಿಪಿ‌ ಭೇಟಿ ಪರಿಶೀಲನೆ ನಡೆಸಿದರು. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹವಾಮಾನದಲ್ಲಿ ಹಠಾತ್ ಬದಲಾವಣೆ: ಕೋಟೆ ನಗರ ಸುತ್ತಮುತ್ತ ಧಾರಾಕಾರ ಮಳೆ
Next articleಕಲಬುರಗಿಯಲ್ಲಿ ಐ.ಟಿ.ಎಫ್ ಪುರುಷರ ಟೆನಿಸ್ ಪಂದ್ಯಾವಳಿ ೨೬ರಿಂದ