ಬೆಟ್ಟಿಂಗ್ ದಂಧೆಗೆ ಲಂಚ: ಪಿಎಸ್‌ಐ, ಪೇದೆ ಲೋಕಾಯುಕ್ತರ ಬಲೆಗೆ

0
8

ರಾಯಚೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸಲು ಲಂಚದ ಬೇಡಿಕೆಯನ್ನಿಟ್ಟಿದ್ದ ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಲೋಕಾಯುಕ್ತ ಪೊಲೀಸರ ಬಲೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಪ್ರಕರಣದ ಹಿನ್ನೆಲೆ: ಗಬ್ಬೂರು ಗ್ರಾಮದ ಫಾರೂಖ್ ಎಂಬುವವರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸಲು ಅವರಿಗೆ ಪಿಎಸ್‌ಐ ಮಂಜುನಾಥ ಅವರು 3 ಲಕ್ಷದ ಲಂಚದ ಬೇಡಿಕೆಯನ್ನಿಟ್ಟಿದ್ದರು. 70 ಸಾವಿರ ನಗದು ಹಾಗೂ 30 ಸಾವಿರ ರೂಪಾಯಿಗಳನ್ನು ಫೋನ್ ಪೇಯಲ್ಲಿ ಲಂಚದ ಹಣವನ್ನು ಪಡೆದುಕೊಂಡಿದ್ದರು. ಶುಕ್ರವಾರ 50 ಸಾವಿರ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು ಪಿಎಸ್‌ಐ ಮಂಜುನಾಥ ಹಾಗೂ ಪೊಲೀಸ್ ಪೇದೆ ರಮೇಶ ಎಂಬುವವರು ಬಲೆಗೆ ಬಿದ್ದಿದ್ದಾರೆ.
ದಾಳಿಯ ನೇತೃತ್ವವನ್ನು ಲೋಕಾಯುಕ್ತ ಎಸ್‌ಪಿ ಶಶಿಧರ ವಹಿಸಿದ್ದರು. ಡಿಎಸ್ಪಿ ರಘು, ಇನ್ಸ್‌ಪೆಕ್ಟರ್‌ಗಳಾದ ಅಮರೇಶ, ಕಾಳಪ್ಪ ಹಾಗೂ ಸಿಬ್ಬಂದಿ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Previous articleಬಾಲಕನನ್ನು ಎಳೆದೊಯ್ದ ಮೊಸಳೆ
Next articleಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಿದ್ಯುತ್ ಕಂಬವೇರಿದ್ದ ವ್ಯಕ್ತಿ ರಕ್ಷಣೆ