Home Advertisement
Home ತಾಜಾ ಸುದ್ದಿ ಬೆಂಕಿ ಹಚ್ಚಿದವರಿಗೆ ಮುತ್ತು ಕೊಡ್ತಾ ಇರಿ

ಬೆಂಕಿ ಹಚ್ಚಿದವರಿಗೆ ಮುತ್ತು ಕೊಡ್ತಾ ಇರಿ

0
118

ಒಬ್ಬ ಜನಪ್ರತಿನಿಧಿಗೆ ಭದ್ರತೆ ಇಲ್ಲ… ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್​ ಮಾಡಿದ್ದನ್ನು ಗೃಹ ಸಚಿವರು ಸಮರ್ಥಿಸಿಕೊಳ್ಳುತ್ತಾರೆ

ವಿಜಯಪುರ: ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರುವ ಅವರು, ಸಿಟಿ ರವಿಗೆ ಬೆದರಿಕೆ ಪತ್ರದ ಕುರಿತಂತೆ ಮಾತನಾಡಿ ಒಬ್ಬ ಜನಪ್ರತಿನಿಧಿಗೆ ಭದ್ರತೆ ಇಲ್ಲದಿರುವ ಕರ್ನಾಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು, ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್​ ಮಾಡಿದ್ದನ್ನು ಗೃಹ ಸಚಿವ ಜಿ ಪರಮೇಶ್ವರ್ ಸಮರ್ಥಿಸಿಕೊಳ್ಳುತ್ತಾರೆ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದವರನ್ನು ಮತ್ತೇನು ಮುತ್ತು ಕೊಡಲಾದೀತೆ ಎಂದು ಸಚಿವ ಹೇಳುತ್ತಾರೆ, ಅವರು ಹಿಂದೂಗಳಿಗೆ ಮುತ್ತಿಡುವುದು ಬೇಡ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ, ಸಾಬರಿಗೆ ಹೀಗೆ ಮುತ್ತು ಕೊಡ್ತಾ ಇರಿ ಎಂದರು.

Previous articleಕಂಪನಿಯಲ್ಲಿ ರಾಸಾಯನಿಕ ಸೋರಿಕೆ: 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ!
Next articleನಕ್ಸಲ್‌ರ ಶರಣಾಗತಿ ಇಷ್ಟೊಂದು ವೈಭವೀಕರಣ ಸಲ್ಲದು