ಬಿಹಾರ್ ಆದ ಕರ್ನಾಟಕ, ಪೊಲೀಸ್ ಸ್ಟೇಶನ್ ಗಳಲ್ಲಿ ಗೂಂಡಾಗಳಿಗೆ ರಾಜಮರ್ಯಾದೆ

0
22

ಹುಬ್ಬಳ್ಳಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಕರ್ನಾಟಕ ಕರ್ನಾಟಕವಾಗಿ ಉಳಿದಿಲ್ಲ. ಬಿಹಾರ್ ಆಗಿದೆ. ಮುಖ್ಯಮಂತ್ರಿಯಾದಿಯಾಗಿ ಯಾರಿಗೂ ಜವಾಬ್ದಾರಿ ಇಲ್ಲ. ಟ್ವೀಟ್ ಮಾಡಿ ಬಿಟ್ಟರೆ ಅವರ ಕೆಲಸ ಮುಗೀತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಹತ್ಯೆಗೀಡಾದ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿ ಶವಾಗಾರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಊರು ಬಿಟ್ಟಿದ ರೌಡಿಗಳು, ಗೂಂಡಾಗಳು ಮತ್ತೆ ಊರು ಸೇರಿದ್ದಾರೆ. ಮಟಕಾ ಆಡಿಸ್ತಾರೆ. ರೌಡಿಸಂ ಮಾಡ್ತಾರೆ, ಬೆದರಿಕೆ ಹಾಕ್ತಾರೆ. ಕೊಲೆ ಸುಲಿಗೆ ನಡೆಯುತ್ತಿವೆ ಎಂದು ಬೊಮ್ಮಾಯಿ ಆರೋಪಿಸಿದರು.
ಮೊನ್ನೆ ಬೆಂಗಳೂರಿನಲ್ಲಿ, ನಿನ್ನೆ ಹುಬ್ಬಳ್ಳಿಯಲ್ಲಿ ಈ ವಿದ್ಯಾರ್ಥಿನಿ, ರಾತ್ರಿ ಗದುಗಿನಲ್ಲಿ ನಾಲ್ವರ ಹತ್ಯೆ ಆಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಎಂದು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಅದು ಸರ್ಕಾರದ ಕೆಲಸ ಎಂದು ಹೇಳಿದರು.

Previous articleಇಂದು ಮೊದಲನೇ ಹಂತದ ಮತದಾನ ಆರಂಭ
Next articleನೇಹಾ ಹತ್ಯೆ ಪ್ರಕರಣ ಎಸ್ಐಟಿಯಿಂದ ತನಿಖೆ ಮಾಡಿ