Home ಅಪರಾಧ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಬಂಧನ

ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಬಂಧನ

0

ಕಲಬುರಗಿ: ನಗರದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿ ಮಣಿಕಂಠ ರಾಠೋಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ತಾಪುರ ಠಾಣೆ ಪೊಲೀಸರಿಂದ ಮಣಿಕಂಠ್ ರಾಠೋಡ್ ಬಂಧನವಾಗಿದ್ದು, ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ತಿಂಗಳಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಇದ್ದಾರೆಂದು ಇನ್ಸ್ಟ್ರಾಗ್ರಾಮ್‌ನಲ್ಲಿ ತಪ್ಪು ಸಂದೇಶ ಪೋಸ್ಟ್ ಮಾಡಿ ಪ್ರಚಾರ ಮಾಡಿದ್ದ ಆರೋಪದಡಿ ಮಣಿಕಂಠ್ ರಾಠೋಡ್ ಅವರ ಮೇಲಿತ್ತು. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಪ್ರಚಾರ ಮಾಡಿದ್ದಕ್ಕಾಗಿ ಮಣಿಕಂಠ್ ವಿರುದ್ಧ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳು ಪ್ರಿಯಾಂಕ್ ಖರ್ಗೆ ಬೆಂಬಲಿಗರು ಇದ್ದಾರೆ ಪೊಲೀಸರು ಅವರನ್ನು ಬಂಧಿಸುತ್ತಿಲ್ಲವೆಂದು ಮಣಿಕಂಠ ಆರೋಪಿಸುತ್ತಿದ್ದರು. ಈ ಬಗ್ಗೆ ಇಂದು ಚಿತ್ತಾಪುರದಲ್ಲಿ ಪೊಲೀಸರು/ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ

Exit mobile version