ದೆಹಲಿ: ಬಿಜೆಪಿ-ಆರ್‌ಎಸ್‌ಎಸ್ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಕೇವಲ ಮಣಿಪುರ ಅಷ್ಟೇ ಅಲ್ಲ, ಖುರ್ಚಿಗಾಗಿ ದೇಶವನ್ನು ಬೇಕಿದ್ದರೆ ಸುಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಯೂಥ್ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ-ಆರ್‌ಎಸ್‌ಎಸ್‌ಗೆ ಕೇವಲ ಅಧಿಕಾರದ ಮೇಲೆ ಮಾತ್ರ ಆಸಕ್ತಿ. ಅವರಿಗೆ ಜನರ ದುಃಖ ಮತ್ತು ನೋವಿನ ಬಗ್ಗೆ ಎಂದಿಗೂ ಕಾಳಜಿ ಮಾಡಲ್ಲ. ತಮ್ಮ ಅಧಿಕಾರಕ್ಕಾಗಿ ದೇಶವನ್ನೇ ಮಾರಾಟ ಮಾಡಬಲ್ಲರು. ದೇಶವನ್ನು ವಿಭಜಿಸುವ ಕೆಲಸ ಅವರು ಮಾಡುತ್ತಾರೆ ಎಂದು ರಾಹುಲ್ ಆರೋಪಿಸಿದ್ದಾರೆ.