ಬಿಜೆಪಿಯಿಂದ ರಘುಪತಿ ಭಟ್‌ ಉಚ್ಚಾಟನೆ

0
17

ಬೆಂಗಳೂರು: ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಕ್ಷದಿಂದ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಉಚ್ಚಾಟಿಸಲಾಗಿದೆ.
ಈ ಕುರಿತಂತೆ ಆದೇಶ ಬಿಜೆಪಿ ಆದೇಶ ಹೊರಡಿಸಿದ್ದು ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದಿದೆ.

Previous articleಡ್ರಗ್ಸ್ ಪ್ರಕರಣದಲ್ಲಿ ಕರ್ನಾಟಕ ಮುಂದೆ ಪಂಜಾಬ್ ಮೀರಿಸಬಹುದು
Next articleಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ತಾರೆ