ಬಿಜೆಪಿಯವರಿಗೆ ಸಮಾನತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಹರಿಪ್ರಸಾದ್

0
102
Hariprasad

ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ ಬಿಜೆಪಿಯವರಿಗೆ ಸಮಾನತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಹೇಳಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಆಡಳಿತದಿಂದ ಸಮಾನತೆ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆಗೆ ಅರ್ಥವಿಲ್ಲ. ಇದೆಲ್ಲಾ ಕೇವಲ ರಾಜಕೀಯ ದೊಂಬರಾಟ ಅಷ್ಟೇ. ಪ್ರತಿ ಗ್ರಾಮದಲ್ಲಿ ಸಹಭೋಜನ ಆಯೋಜಿಸಲಿ ಆಗ ಸಮಾನತೆ ಬಗ್ಗೆ ಒಪ್ಪಿಕೊಳ್ಳುತ್ತೇವೆ ಎಂದರು.
ಅಲ್ಪಸಂಖ್ಯಾತರ ಮೀಸಲಾತಿ ಮೊಟಕಿಗೆ ಹುನ್ನಾರ ನಡೆಯುತ್ತಿದ್ದು, ಹಂತ ಹಂತವಾಗಿ ಅಲ್ಪಸಂಖ್ಯಾತರನ್ನು ದೂರವಿಡುವ ಕೆಲಸ ಮಾಡಲಾಗುತ್ತಿದೆ. ಮೀಸಲಾತಿ ಪರವಾಗಿದ್ದೇವೆ ಎಂದು ನಾಗಪುರದಲ್ಲಿರುವ ಬಿಜೆಪಿ ಸೂತ್ರದಾರರು ಹೇಳಲಿ ಎಂದು ಆರ್‌ಎಸ್ಎಸ್‌ನ್ನು ಟೀಕಿಸಿದರು.

Previous articleಮೀಸಲಾತಿ ಹೆಚ್ಚಳ, ಸರ್ಕಾರದ ದೊಂಬರಾಟ: ಪ್ರಿಯಾಂಕ್ ಖರ್ಗೆ
Next articleಭಾರಿ ಮಳೆ: ಮನೆಗಳಿಗೆ ನುಗ್ಗಿದ ಮಳೆ ನೀರು