ಬಿಜೆಪಿಯಲ್ಲಿ ಘಟಾನುಘಟಿಗಳಿಗೆ ಹಿನ್ನಡೆ

0
16
bjp

ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿಯ ಜಿಲ್ಲೆಯಲ್ಲಿ ಘಟಾನುಘಟಿಗಳಿಗೆ ಮತದಾರ ಶಾಕ್ ನೀಡಿದ್ದಾನೆ.
ಗೋಕಾಕದಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ಐದು ಸುತ್ತುಗಳಲ್ಲೂ ಸತತ ಹಿನ್ನಡೆ ಅನುಭವಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ನ ಡಾ. ಕಡಾಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ನಿಪ್ಪಾಣಿಯಲ್ಲೂ ಅಚ್ಚರಿಯ ಫಲಿತಾಂಶ ಬಂದಿದ್ದು, ಸಚಿವೆ ಶಶಿಕಲಾ ಜೊಲ್ಲೆ ಮೂರನೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ಎನ್ ಸಿಪಿಯ ಉತ್ತಮ ಪಾಟೀಲ ಮುನ್ನಡೆ ಸಾಧಿಸಿದ್ದಾರೆ. ಕುಡಚಿಯಲ್ಲಿ ಬಿಜೆಪಿಯ ಪಿ.ರಾಜೀವ್ ಶಾಕ್ ನೀಡಿದ್ದು, ಕಾಂಗ್ರೆಸ್ ನ ಮಹೇಂದ್ರ ತಮ್ಮಣ್ಣವರ ಮುನ್ನಡೆ ಸಾದಿಸಿದ್ದಾರೆ. ಗಮನ ಸೆಳೆದಿದ್ದ ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ರಾಮ
ದುರ್ಗದಲ್ಲಿ ಕಾಂಗ್ರೆಸ್ ನ ಅಶೋಕ ಪಟ್ಟಣ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಚಿಕ್ಕರೇವಣ್ಣ ಹಿನ್ನಡೆ ಅನುಭವಿಸಿದ್ದಾರೆ. ಬೆಳಗಾವಿ ದಕ್ಷಣದಲ್ಲಿ ಅಭಯ ಪಟೀಲ 9000 ಸಾವಿರಕ್ಕೂ‌ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಿತ್ತೂರಿನಲ್ಲಿ ಹಾಲಿ ಶಾಸಕ ಮಹಾಂತೇಶ ದೊಡಗೌಡರ ಹಿನ್ನಡೆ ಸಾಧಿಸಿದ್ದಾರೆ. ರಾಯಭಾಗದಲ್ಲಿ ಶ್ರೀಮಂತ ಪಾಟೀಲ 60 ಮತಗಳ ಮುನ್ನಡೆ ಸಾಧಿಸಿದ್ದರೆ, ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ, ಅಥಣಿಯಲ್ಲಿ ಲಕ್ಷ್ಮಣ ಸವದಿ ಉತ್ತಮ ಲೀಡ್ ಸಾಧಿಸಿದ್ದಾರೆ.

Previous articleಧಾರವಾಡ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿ
Next articleರಾಜ್ಯ ವಿಧಾನಸಭಾ ಚುನಾವಣೆ ಪ್ರತಿ ಕ್ಷಣ ಕ್ಷಣದ ಮಾಹಿತಿ