ಬಿಜೆಪಿಗೆ ರೌಡಿಗಳು ಸಾಕು, ಹಿಂದುತ್ವಕ್ಕೆ ದುಡಿದವರು ಬೇಡ – ಪ್ರಮೋದ ಮುತಾಲಿಕ್‌ ಕಿಡಿ

0
19
ಮುತಾಲಿಕ್

ಗಂಗಾವತಿ: ಹಣ ಇದ್ದವರನ್ನು, ರೌಡಿಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತ್ತಿದ್ದಾರೆ. ತ್ಯಾಗ, ಬಲಿದಾನ ಮಾಡಿ ಶ್ರಮ ವಹಿಸಿ ದುಡಿದ ಹಿಂದೂ ಕಾರ್ಯಕರ್ತರು ಬಿಜೆಪಿಗೆ ಬೇಕಾಗಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ವಾಗ್ದಾಳಿ ನಡೆಸಿದರು.
ಇಲ್ಲಿನ ಅಂಜನಾದ್ರಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಶ್ರೀರಾಮ ಸೇನೆಯ ಸಿದ್ಧಲಿಂಗ ಶ್ರೀಗಳು ಹಾಗೂ ನಾನು ರಾಜಕೀಯ ಪ್ರವೇಶದ ನಿರ್ಧಾರ ಮಾಡಿದರೆ ನಿಮಗೆ ಕಾಣುವುದಿಲ್ಲ. ಬದಲಾಗಿ ಗೂಂಡಾಗಳು ಕಾಣುತ್ತಾರೆ. ಇಡೀ ಸಮಾಜದ ಸ್ವಾಸ್ಥ್ಯ ಮತ್ತು ನೈತಿಕತೆಯನ್ನು ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಸುತ್ತೇವೆ. ಇದರಲ್ಲಿ ಐದು ಜನ ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಎಂದರು. ಅಂಜನಾದ್ರಿ ಆವರಣದ 500 ಮೀಟರ್ ಅಂತರದಲ್ಲಿ ಅನ್ಯ ಧರ್ಮಿಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ಟರೆ ನಮ್ಮ ಹನುಮ ಭಕ್ತರು ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಮುತಾಲಿಕ್ ಎಚ್ಚರಿಕೆ‌ ನೀಡಿದರು.

Previous articleಭಕ್ತ ಕನಕದಾಸರ ಕಂಚಿನ ಮೂರ್ತಿ ಮೆರವಣಿಗೆ
Next articleಸುಪಾರಿ ಕೊಟ್ಟು ಮಗನ ಹತ್ಯೆ ಮಾಡಿಸಿದ ತಂದೆ