ಬಿಎಸ್‌ವೈ ಪರ ಬ್ಯಾಟ್ ಬೀಸಿದ ಶಾಮನೂರು

0
26
ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದಾರಿಯಲ್ಲಿ ಹೋಗುವವರು ಕಂಪ್ಲೇಂಟ್‌ ಕೊಟ್ಟ ತಕ್ಷಣ ಅರೆಸ್ಟ್ ಮಾಡುವುದೆಂದರೆ ಏನರ್ಥ. ಬಿಎಸ್‌ವೈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಯಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 53 ಜನರ ವಿರುದ್ಧ ಆಕೆ ಇದೇ ರೀತಿ ಕಂಪ್ಲೇಂಟ್‌ ಕೊಟ್ಟಿದ್ದಾಳೆ. ಹೀಗೆ ದೂರು ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ? ಅದೆಲ್ಲಾ ಆರೋಪಗಳು ಸಾಬೀತಾದರೆ ಕ್ರಮವಾಗುತ್ತದೆ ಎಂದರು.
ಯಾರಾದ್ರೂ ಹೆಣ್ಣು ಮಗಳು ಬಂದು ಕಂಪ್ಲೇಂಟ್‌ ಕೊಟ್ಟರೆ ಹಂಗೆ ಅರೆಸ್ಟ್ ಅಂದರೆ ಏನರ್ಥ? ಆರೋಪ ಸಾಬೀತಾದ ನಂತರ ಶಿಕ್ಷೆ ವಿಧಿಸಿದರೆ ಅದಕ್ಕೊಂದು ಅರ್ಥ. ಆದರೆ, 53 ಜನರ ಮೇಲೆ ಹೀಗೆ ಕಂಪ್ಲೇಂಟ್ ಮಾಡಿರುವ ಮಹಿಳೆ ದೂರಿಗೆ ಬೆಲೆ ಇರುತ್ತದೆಯೇ ಎಂದು ಪ್ರಶ್ನಿಸಿದರು.
ದರ್ಶನ್‌ ಪ್ರಕರಣಕ್ಕೆ ಶಾಮನೂರು ವಿರೋಧ
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನಿಗೆ ಬುದ್ಧಿ ಹೇಳಿ ಕಳಿಸಬೇಕಿತ್ತು. ಆದರೆ, ಸಾಯುವಂತೆ ಹೊಡೆಯಬಾರದಿತ್ತು. ಹಾಗೆ ಹೊಡೆದಿರುವುದೇ ತಪ್ಪು. ದರ್ಶನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಭಾವೀಮದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಒತ್ತಾಯಿಸಲಾಗಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

Previous articleಐವರು ಐಎಎಸ್​ ಅಧಿಕಾರಿಗಳ ವರ್ಗಾವಣೆ
Next articleಐಪಿಎಸ್ ಅಧಿಕಾರಿಗಳ ವರ್ಗಾವಣೆ