ಬಿಆರ್‌ಎಸ್ ಶಾಸಕಿ ಲಾಸ್ಯಾ ನಂದಿತಾ ರಸ್ತೆ ಅಪಘಾತದಲ್ಲಿ ಸಾವು

0
22

ಹೈದರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ಬಿ ಆರ್ ಎಸ್ ಶಾಸಕಿ ಜಿ. ಲಾಸ್ಯ ನಂದಿತಾ(37) ಅವರು ಮೃತಪಟ್ಟಿದ್ದಾರೆ.
ಹೈದರಾಬಾದ್ ಹೊರವಲಯದಲ್ಲಿರುವ ತೆಲಂಗಾಣದ ಸಂಗೆರಡ್ಡಿ ಜಿಲ್ಲೆಯ ಪಟಂಚೆರು ಹೊರವಲಯದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಲಾಸ್ಯಾ ನಂದಿತಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ವಾಹನದ ಚಾಲಕನಿಗೆ ಕೂಡ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ನಂದಿತಾ ಅವರು ಮೊದಲ ಬಾರಿ ಶಾಸಕಿಯಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಶಾಸಕಿಯಾಗಿ ಆಯ್ಕೆಯಾಗುವ ಮುನ್ನ ನಂದಿತಾ ಅವರು ಕಾವಡಿಗುಡ ಕಾರ್ಪೊರೇಟರ್ ಆಗಿದ್ದರು.

Previous articleಹುಬ್ಬಳ್ಳಿ ಜನಶತಾಬ್ದಿ: ಮಾರ್ಚ್ 1ರಿಂದ ಎರಡನೇ ಪ್ಲ್ಯಾಟ್ ಫಾರ್ಮ್‌ನಿಂದ ಸಂಚಾರ
Next articleಕಲಬುರಗಿ ಯುವಕರ ರಕ್ಷಣೆಗಾಗಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ