ಬಾವಿಗೆ ಬಿದ್ದ ಓರ್ವನನ್ನು ರಕ್ಷಿಸಲು ಹೋಗಿ ಇನ್ನಿಬ್ಬರೂ ಜಲಸಮಾಧಿ

0
22

ಯಲ್ಲಾಪುರ: ಪಂಪ್ ರಿಪೇರಿಗೆಂದು ಬಾವಿಗೆ ಇಳಿದಿದ್ದ ವ್ಯಕ್ತಿ ಆಯತಪ್ಪಿ ನೀರಿಗೆ ಬಿದ್ದಾಗ, ಆತನನ್ನು ರಕ್ಷಿಸಲು ಇಳಿದ ಇನ್ನಿಬ್ಬರೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಮಾವಿನಕಟ್ಟಾದಲ್ಲಿ ಗುರುವಾರ ಸಂಭವಿಸಿದೆ.
ಶಿರಸಿಯ ದೇವನಿಲಯದ ನಿವಾಸಿ ಗೋವಿಂದ ಸೋಮಯ್ಯ ಪೂಜಾರಿ (೬೦) ಎನ್ನುವವರು ಯಲ್ಲಾಪುರ ತಾಲೂಕಿನ ಮಾವಿಕಟ್ಟಾದ ಮನೆಯ ಪಂಪ್ ಸರಿಮಾಡುವಾಗ ಬಾವಿಯೊಳಗೆ ಬಿದ್ದಿದ್ದಾರೆ. ಇವರನ್ನು ರಕ್ಷಿಸಲೆಂದು ಅಲ್ಲೇ ಇದ್ದ ಮಾವಿನಕಟ್ಟಾದ ಗಣೇಶ ರಾಮದಾಸ್ ಶೇಟ್ (೨೩) ಹಾಗೂ ಭರತನಹಳ್ಳಿಯ ಸುರೇಶ ನಾಯರ್ (೪೦) ಬಾವಿಯೊಳಗೆ ಇಳಿದಿದ್ದು, ಮೂವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ
Next articleವೀರ ಯೋಧನಿಗೆ ಪುಷ್ಪ ನಮನ